SSLC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ:ಮೇ.27:ಜೇವರ್ಗಿ ತಾಲೂಕಿನ ಜೇರಟಗಿಯ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರಾಮ್ ಎಜುಕೇಶನ್ ಫೌಂಡೇಶನ್ ತರಬೇತಿ ಕೇಂದ್ರದ ವತಿಯಿಂದ SSLC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ ಮಹಾಂತ ಶಿವಯೋಗಿ ಸ್ವಾಮಿಗಳು ( ವಿರಕ್ತ ಮಠ ಜೇರಟಗಿ ) ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಮಲ್ಲಣ್ಣ ಯಲಗೋಡ್ ( ತಾಲೂಕ ದಂಡಾಧಿಕಾರಿಗಳು ಜೇವರ್ಗಿ ) ಹಾಗೂ ಮುಖ್ಯ ಅತಿಥಿಗಳ ಸ್ಥಾನದಲ್ಲಿ ಶ್ರೀ ಡಾ / ಸಿದ್ದು ಪಾಟೀಲ್ ( ತಾಲೂಕ ವೈದ್ಯಾಧಿಕಾರಿಗಳು ಜೇವರ್ಗಿ ) ಶ್ರೀ ತಿಮ್ಮಯ್ಯ ಬಿ ಕೆ ( ಪಿಎಸ್ಐ ಶಹಾಪುರ) ಶ್ರೀ ಬಸವರಾಜ್ ಜಿ ಮಲ್ಲಾಡ ( ಮುಖ್ಯ ಗುರುಗಳು ADND ಪ್ರೌಢಶಾಲೆ ಜೇರಟಗಿ ) ಹಾಗೂ ದರೇಶ್ ಕಲ್ಲೂರ್ ( ನಿಲಯ ಪಾಲಕರು MDRS ನೇಲೋಗಿ ) ಕಾರ್ಯಕ್ರಮದ ಅಧ್ಯಕ್ಷರಾಗಿ ಸಿದ್ದರಾಮ ಕುಂಬಾರ್ (S ರಾಮ ಎಜುಕೇಶನ್ ಫೌಂಡೇಶನ್ ಅಧ್ಯಕ್ಷರು ) ನಿರೂಪಕರಾಗಿ ರವಿ ಮಂದೇವಾಲ್ ಮತ್ತಿತರರು ಇದ್ದರು.