@h೧೮ = ಗ್ರಾ.ಪಂ. ಚುನಾವಣೆ : ಸಂಸದ ನಾಯಕ ಮತದಾನ

ರಾಯಚೂರು.ಡಿ.೨೭- ಎರಡನೇ ಹಂತದ ಗ್ರಾಮ ಪಂಚಾಯತ ಚುನಾವಣಾ ಮತದಾನವಾದ ಇಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತವರು ಗುರುಗುಂಟಾದ ಎಸ್ಸಿ ಕಾಲೋನಿಯ ವಾರ್ಡ್ ೪ ರ ಸರಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆಯ ಮತಗಟ್ಟೆಯ (೬೫) ಂ ಕ್ರಮ ಸಂಖ್ಯೆ ೧೦೮೮ ರಲ್ಲಿ ಮತದಾನ ಮಾಡುವ ಮೂಲಕ ಮತ ಹಕ್ಕು ಚಲಾಯಿಸಿದರು.
ಇದೇ ಸಂದರ್ಭದಲ್ಲಿ ಕತ೯ವ್ಯ ನಿರತ ಚುನಾವಣೆ ಅಧಿಕಾರಿ ವಗ೯ಕ್ಕೆ ಮತದಾನಕ್ಕಾಗಿ ಬರುವ ಮತದಾರರಿಗೆ ಸರಕಾರ ನೀಡಿರುವ ಯಾವುದೇ ಗುರುತಿನ ಚೀಟಿಯಿದ್ದರೂ ಮತದಾನಕ್ಕೆ ಅವಕಾಶ ನೀಡುವಂತೆ ಸಲಹೆ. ಇದೇ ಸಂದರ್ಭದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಇವುಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಪವಿತ್ರ ಮತದಾನ ಹಕ್ಕುವಿನ ಜೊತೆ ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು. ಗುರುಗುಂಟ ಗ್ರಾಮದ ಹೆಚ್ಚಿನ ಜನಸಂಖ್ಯೆ ಹಿನ್ನಲೆಯಲ್ಲಿ ಮುಂದಿನ ಬಾರಿ ಪಟ್ಟಣ ಪಂಚಾಯತ್ ಆಗಿ ಪರಿವತಿ೯ಸಲು ಶ್ರಮಿಸುವುದಾಗಿ ಭರವಸೆ ನೀಡಿದರು.