ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಆರ್.ಟಿ. ನಗರ ಹೆಚ್.ಎಂ.ಟಿ. ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ನಿಗಮ ಮಂಡಳಿಯಿಂದ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಶಾಸಕ ಭೈರತಿ ಸುರೇಶ್ರವರು ಆದೇಶ ಪ್ರತಿ ಹಾಗೂ ಸವಲತ್ತುಗಳನ್ನು ವಿತರಣೆ...
ಪುಲಕೇಶಿ ನಗರ ಕ್ಷೇತ್ರ ವ್ಯಾಪ್ತಿಯ ಸುಜಾನ್ ನಗರದಲ್ಲಿ ನಿರ್ಮಾಣಗೊಳ್ಳಲಿರುವ ೧೦೦ ಒಂಟಿ ಮನೆ ಕಾಮಗಾರಿಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿರವರು ಗುದ್ದಲಿ ಪೂಜೆ ನೇರವೇರಿಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದಾರೆ.
ನವದೆಹಲಿಯಿಂದ ಇಂದು ನಗರದ ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಸ್ವಾಗತಿಸಿದರು.
ನಗರದ ವಾರ್ಡ ನಂ. 68 ರಲ್ಲಿ ಶಾಲಾ ಮಕ್ಕಳಿಗೆ ಶ್ರೀ ವೆಂಕಟೇಶ ಮೇಸ್ತ್ರೀ ಅಭಿಮಾನಿಗಳ ಬಳಗದಿಂದ ಉಚಿತ ನೋಟಬುಕ್, ಪೆನ್ಸಿಲ್ ಕಿಟ್ ವಿತರಿಸಲಾಯಿತು. ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಿಕಾ ವೆಂಕಟೇಶ ಮೇಸ್ತ್ರಿ, ಅನುರಾಧಾ...
ಭಗತ್ ಸಿಂಗ್ ಹುತಾತ್ಮ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿಯ ಮಧುರಾ ಕಾಲೋನಿಯಲ್ಲಿನ ಭಗತ್ ಸಿಂಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ವಿಕಾಸ ಸೊಪ್ಪಿನ, ಕಿಶೋರ್ ಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ ಹಾಗೂ ಶ್ರಿರಂಗ ಮುತಾಲಿಕದೇಸಾಯಿ ಮುಂತಾದವರು ಇದ್ದರು.
ಯುಗಾದಿ ಮಹೋತ್ಸವದ ಅಂಗವಾಗಿ ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣದ ಶ್ರೀ ಮಾರುತಿ ದೇವರ ದೇವಸ್ಥಾನದ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ರಥಕ್ಕೆ ಹಣ್ಣು, ಉತ್ತತ್ತಿ ಎಸೆದು ಕೃತಾರ್ಥರಾದರು.