Éೈತರಿಗೆ 3 ಪಾಳಿ ವಿದ್ಯುತ್ ಬೇಡ ಮೊದಲಿನಂತೆ ದಿನದಲ್ಲಿ ವಿದ್ಯುತ್ ನೀಡಿ: ಡಾ ಶೈಲೇಂದ್ರ ಬೆಲ್ದಾಳೆ

ಬೀದರ್ :ಅ.19: ಈಗಾಗಲೇ ಬರಗಾಲದಿಂದ ರೈತರು ಹೈರಾಣಾಗಿ ಹೋಗಿದ್ದಾರೆ ಇದೀಗ ರಾಜ್ಯ ಸರ್ಕಾರ ನೀರಾವರಿ ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ ಇದ್ದ ವಿಧ್ಯುತ ಇದೀಗ 5 ಗಂಟೆಗೆ ಕಡಿತಗೊಳಿಸಿ ಬೆಳಿಗ್ಗೆ, ಮಧ್ಯಾಹ್ನ, ಮಧ್ಯರಾತ್ರಿ ಮೂರು ಪಾಳಿ ವಿಧ್ಯುತ ವಿತರಣೆ ನಿಯಮ ಮಾಡಿದ್ದು ಸಮಸ್ಯೆಯಲ್ಲಿದ್ದ ರೈತರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಹೀಗಾಗಿ ಪಪ್ ಸೆಟ್ ಗಳಿಗೆ ವಿಧ್ಯುತ ಮೊದಲಿನಂತೆ ದಿನದಲ್ಲಿ ನೀಡಬೇಕು ರಾತ್ರಿ ವೇಳೆ ವಿದ್ಯುತ್ ನೀಡಿದರೆ ರೈತರು ಜಮೀನಿಗೆ ಹೋಗಿ ನೀರು ಬಿಡುವುದು ಹೇಗೆ? ರಾತ್ರಿ ವೇಳೆ ಕಾಡು ಪ್ರಾಣಿಗಳ ಹಾವಳಿ ಮತ್ತು ಹಾವುಗಳ ಓಡಾಟ ಹೆಚ್ಚಿರುತ್ತದೆ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಯಾರು ಜವಾಬ್ದಾರಿ ಹೀಗಾಗಿ ಸರ್ಕಾರ ಕೂಡಲೇ ವಿಧ್ಯುತ ವಿತರಣೆ ನಿಯಮ ಹಿಂಪಡೆದು ಮೊದಲಿನಂತೆ ರೈತರ ಪಪ್ ಸೆಟ್ ಗಳಿಗೆ ವಿದ್ಯುತ್ ನೀಡಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.