ಕ್ಷಯರೋಗ ಜನಜಾಗೃತಿ ಜಾಥಾ..
ತುಮಕೂರಿನಲ್ಲಿ ವಿಶ್ವ ಕ್ಷಯರೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನಜಾಗೃತಿ ಜಾಥಾ ನಡೆಸಲಾಯಿತು.
ಕೈ ನಾಯಕರ ಪ್ರತಿಭಟನೆ
ರಾಜ್ಯ ಸರಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ...
ಎರಡು ಹಾವುಗಳ ರಕ್ಷಣೆ
ಕಲಬುರಗಿ: ನಗರದ ಪೊಲೀಸ್ ಕ್ವಾಟರ್ಸ್ ಮತ್ತು ಶಿವಾಜಿ ನಗರದ ಮನೆಯೊಂದರಲ್ಲಿ ಕಂಡುಬಂದ ಎರಡು ನಾಗರ ಹಾವುಗಳನ್ನು ಸ್ನೇಕ್ ಪ್ರಶಾಂತ್ ಸೆರೆ ಹಿಡಿದು ರಕ್ಷಣೆ ಮಾಡಿದರು. ಹಾವುಗಳ ರಕ್ಷಣೆಗಾಗಿ ಸ್ನೇಕ್ ಪ್ರಶಾಂತ್ ಅವರನ್ನು 24×7...
ಪಶುಗಳ ಲಸಿಕೆ ಹಾಕಿಸಲು ಮನವಿ:
ಗುರುಮಠಕಲ್ ತಾಲೂಕು ಚಂಡರಕಿ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಪಶುಗಳಿಗೆ ಚರ್ಮಗಂಟು ಲಸಿಕೆ ನೀಡುತ್ತಿದ್ದು ರೈತರು ಸದುಪಯೋಗ ಪಡೆಯಲು ಪಶುವೈದ್ಯ ಪರಿವೀಕ್ಷಕ ಪ್ರೇಮರಾಜ ರಾಯಿಕೊಟಿ ಮನವಿ ಮಾಡಿದರು.
ಚಂಡ್ರಿಕಿಯಲ್ಲಿ ಯುಗಾದಿ ಕೋಲಾಟ:
ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮದಲ್ಲಿ ಯುಗಾದಿ ಹಬ್ಬದಂದು ವೀರಾಂಜನೇಯ ದೇವಾಲಯ ಆವರಣದಲ್ಲಿ ಪುರುಷರು ಕೋಲಾಟ ಪ್ರದರ್ಶಿಸಿದರು
ಯುಗಾದಿ ಕೃಷಿ ಚಟುವಟಿಕೆ:
ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮದಲ್ಲಿ ಹೊಸ ಸಂವತ್ಸರ ಆರಂಭದ ಯುಗಾದಿಯಂದು ರೈತರು ಸಾಂಪ್ರದಾಯಿಕವಾಗಿ ವರ್ಷದ ಪ್ರಥಮ ಕೃಷಿ ಚಟುವಟಿಕೆ ಆರಂಭಿಸಿದರು.
ಕುಂಬಾರ ಅಭಿವೃದ್ಧಿ ನಿಗಮ ರಚನೆಗೆ ಕೃತಜ್ಞತೆ:
ಸೇಡಂ ತಾಲೂಕಿನ ಕುಂಬಾರ ಸಮಾಜದ ಮುಖಂಡ ಬನ್ನಪ್ಪ ಬಿ. ಕುಂಬಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಕುಂಬಾರ ಅಭಿವೃದ್ಧಿ ನಿಗಮ ರಚಿಸಿದ ರಾಜ್ಯ ಸರ್ಕಾರ ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ...
ವಿವಿಧ ಯೋಜನೆಗಳಿಗೆ ಚಾಲನೆ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಸಚಿವರಾದ ಅಶ್ವತ್ಥನಾರಾಯಣ್, ಪ್ರಭು ಚೌವಾಣ್ ಮತ್ತಿತರರು ಇದ್ದಾರೆ.
ಕಾರ್ಮಿಕರ ಪ್ರತಿಭಟನೆ
ಕೆಲಸದ ಅವಧಿ ಹೆಚ್ಚಳ ಮತ್ತು ಮಹಿಳೆಯರಿಗೆ ರಾತ್ರಿ ಪಾಳಿಗೆ ಅನುಮತಿ ಹಿಂಪಡೆಯುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸದಸ್ಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿಂದು ಪ್ರತಿಭಟನೆ ನಡೆಸಿದರು.
ಚಲನಚಿತ್ರೋತ್ಸವಕ್ಕೆ ಸಿದ್ಧತೆ
ವಿಧಾನಸೌಧದ ಮುಂಭಾಗದಲ್ಲಿ ಇಂದಿನಿಂದ ಆರಂಭವಾಗುವ ೧೪ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೇದಿಕೆ ಯನ್ನು ಅಚ್ಚುಕಟ್ಟಾಗಿ ಸಿಂಗಾರಗೊಳಿಸಲಾಗುತ್ತಿದೆ