Àಭಾರತ ಸೇವಾದಳ ಶಿಕ್ಷಕ ಮಿಲಾಪ ಶಿಬಿರ

ವಿಜಯಪುರ, ಜು.15-ವಿಜಯಪುರ ತಾಲೂಕು ಮಟ್ಟದ ಭಾರತ ಸೇವಾದಳ ಶಿಕ್ಷಕ ಮಿಲಾಪ ಶಿಬಿರ/ಪುನಃಶ್ಚೇತನ ಶಿಬಿರವನ್ನು ನಗರದ ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ದಿನಾಂಕ 14-07-2022 ರಂದು ಆಯೋಜಿಸಲಾಗಿತ್ತು,
ಕಾರ್ಯಕ್ರಮದಲ್ಲಿ 2022 ರಿಂದ 2027 ರ 5 ವರ್ಷಗಳ ಅವಧಿಗೆ ಜಿಲ್ಲಾ ಸಮಿತಿ ಹಾಗೂ ವಿಜಯಪುರ ತಾಲೂಕು ಸಮಿತಿಗೆ ನೂತನವಾಗಿ ಆಯ್ಕೆಯಾದ ಎಸ್ ಪಿ ಬಿರಾದಾರ (ಕಡ್ಲೇವಾಡ) ಜಿಲ್ಲಾ ಅಧ್ಯಕ್ಷ, ಎಸ್ ಜಿ ಕೋರಿ ಜಿಲ್ಲಾ ಕಾರ್ಯದರ್ಶಿ, ಡಿ ಬಿ ಹಿರೇಕುರುಬರ ಜಿಲ್ಲಾ ಕೋಶಾಧ್ಯಕ್ಷ, ಶ್ರೀಶೈಲ ಕೆ ಬಳಗಾನೂರ ಜಿಲ್ಲಾ ಸಮಿತಿ ಸದಸ್ಯ, ಬಂದೇ ನವಾಜ್ ಮಾಬರಿ ಜಿಲ್ಲಾ ಸಮಿತಿ ಸದಸ್ಯ, ಅಶೋಕ ಗುಡದಿನ್ನಿ ಜಿಲ್ಲಾ ಸಮಿತಿ ಸದಸ್ಯ, ಶ್ರೀಮತಿ ಎಮ್ ಎಮ್ ತೆಲಗಿ ಜಿಲ್ಲಾ ಸಮಿತಿ ಸದಸ್ಯ, ಸೋಮಶೇಖರ ಜಿ ರಾಠೋಡ ಜಿಲ್ಲಾ ಸಮಿತಿ ಸದಸ್ಯ ಶಿವನಗೌಡ ಎಮ್ ಪಾಟೀಲ್ ತಾಲೂಕು ಅಧ್ಯಕ್ಷ, ರಾಜು ಹಿಪ್ಪರಗಿ ತಾಲೂಕು ಉಪಾಧ್ಯಕ್ಷ, ಎಸ್ ಎಸ್ ಬ್ಯಾಕೋಡ ತಾಲೂಕು ಕಾರ್ಯದರ್ಶಿ, ಬಸಪ್ಪ ಎಸ್ ಜೋರಾಪೂರ ಕೋಶಾಧ್ಯಕ್ಷ, ಶಂಕರೇಗೌಡ ಬಿರಾದಾರ ಸದಸ್ಯ, ಶ್ರೀಮತಿ ಸೀಮಾ ಕಲಗೊಂಡ ಸದಸ್ಯ, ಶ್ರೀಮತಿ ಎಮ್ ಆಯ್ ಬೇಪಾರಿ ಸದಸ್ಯ, ಡಿ ಆರ್ ಬಗಲಿ ಸದಸ್ಯ ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನಿರೂಪಣೆ ಶ್ರೀಮತಿ ಎಮ್ ಎಮ್ ತೆಲಗಿ, ಸ್ವಾಗತವನ್ನು ನಾಗೇಶ ಡೋಣೂರ ವಲಯ ಸಂಘಟಕ ಭಾರತ ಸೇವಾದಳ ವಿಜಯಪುರ, ಶ್ರೀಮತಿ ಎಂ.ಆಯ್. ಬೇಪಾರ ವಂದನಾರ್ಪಣೆ ಮಾಡಿದರು.