ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವತಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ 71 ನೇ ಹುಟ್ಟುಹಬ್ಬದ ಪ್ರಯುಕ್ತ ಗಬ್ಬೂರಿನ ಲಕ್ಕುಂಡಿ ಅವರ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡುವುದರ ಮೂಲಕ ಆಚರಿಸಲಾಯಿತು. ಪ್ರಭು ನವಲಗುಂದಮಠ, ಲಿಂಗರಾಜ ಪಾಟಿಲ, ಸತೀಶ ಶೇಜವಾಡಕರ, ರಾಧಾಬಾಯಿ ಸಫಾರೆ, ಲಕ್ಷ್ಮೀಬಾಯಿ ಬಿಜವಾಡ, ಬಸವರಾಜ ಅಮ್ಮಿನಬಾವಿ, ನಾಗರಾಜ ಟಗರಗುಂಟಿ, ರೇಣಕಪ್ಪ ಕೇಲೂರ ಮತ್ತಿತರರು ಉಪಸ್ಥಿತರಿದ್ದರು.