ಚಿತ್ರರಂಗ ಉಳಿಸಿ ಅಭಿಯಾನ ತಾರೆಯರಿಂದ ಸಿಎಂಗೆ ಒಕ್ಕೊರಲ‌ ಆಗ್ರಹ

ಬೆಂಗಳೂರು, ಏ.3- ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ‌ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ.50 ಕ್ಕೆ ಇಳಿಸಿರುವ ರಾಜ್ಯ ಸರ್ಕಾರದ ನಡೆಗೆ ಕನ್ನಡ ಚಿತ್ರರಂಗ ತಿರುಗಿ ಬಿದ್ದಿದ್ದೆ.

ಚಿತ್ರಮಂದಿರದಲ್ಲಿ ಶೇ.100 ರಷ್ಟು ಸಾಮರ್ಥ್ಯ ಹೆಚ್ಚಳ ಮಾಡವಂತೆ ಸ್ಯಾಂಡಲ್ ವುಡ್ ತಾರೆಯರು ಒಕ್ಕೊರಲಿನಿಂದ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಚಿತ್ರರಂಗ ಉಳಿಸಿ, ಚಿತ್ರಮಂದಿರದಲ್ಲಿ ಶೇ.100 ಅನುಮತಿ ನೀಡಿ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ನಟರು ಆರಂಭಿಸುವ‌ ಮೂಲಕ ಮುಖ್ಯಮಂತ್ರಿ ‌ಬಿ.ಎಸ್ ಯಡಿಯೂರಪ್ಪ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.

ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯೂ ನಟರ ಆಗ್ರಹಕ್ಕೆ ಧ್ವನಿಗೂಡಿಸಿದ್ದು ಹೋರಾಟಕ್ಕೆ ಮತ್ತಷ್ಟು ಬಲ‌‌ ಬಂದಿದೆ.

ಜೊತೆಗೆ ಪುನೀತ್ ರಾಜ್ ಕುಮಾರ್ ಅಭಿನಯದ “ಯುವರತ್ನ” ಚಿತ್ರ ಬಿಡುಗಡೆಯಾದ ಎರಡನೇ ದಿನದಲ್ಲಿ‌‌ ಸರ್ಕಾರ ‌ಏಕಾಏಕಿ ನಿಯಮ‌ ಜಾರಿಗೆ ತಂದ ಹಿನ್ನೆಲೆಯಲ್ಲಿ ಪ್ರಮುಖ ನಟರು ಒಕ್ಕೊಲರ ಧ್ವನಿ ಗೂಡಿಸಿರುವುದು ಚಿತ್ರರಂದ ಹಿತ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ

ಸಮಸ್ಯೆ ಬಗೆಹರಿಸಿ:

ಚಿತ್ರರಂಗ ಸಮಸ್ಯೆಗೆ ಸಿಲುಕಿದೆ.ಸರ್ಕಾರ ಅರ್ಥ ಮಾಡಿಕೊಂಡು ತಕ್ಷಣ ಸಮಸ್ಯೆಯನ್ನು ಬಗೆಹರಿಸಿ. ಚಿತ್ರಮಂದಿರಗಳಲ್ಲಿ ಎಲ್ಲಾ ‌ನಿಯಮ ಮತ್ತು ಮಾರ್ಗಸೂಚಿ ಪಾಲಿಸಲಾಗುವುದು.ಈ‌ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶೀಘ್ರ ಸಮಸ್ಯೆ ಬಗೆಹರಿಸಿ..

  • ಶಿವರಾಜ್ ಕುಮಾರ್ ,ಹಿರಿಯ ನಟ,

ಅಗತ್ಯ ಮುನ್ನೆಚ್ಚರಿಕೆ

ಸಿನಿಮಾ ಎಂಬ ಮಾದ್ಯಮ ಕುಟುಂಬಗಳು ಬಂದು ತಮ್ಮ ಎಲ್ಲಾ ಉದ್ವಿಗ್ನತೆ ಮತ್ತು ಭಯ ಪಕ್ಕಕ್ಕಿಟ್ಟು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಇಟ್ಟುಕೊಂಡು ಆನಂದಿಸುವ ಮಾದ್ಯಮವಾಗಿದೆ.ಜವಬ್ದಾರಿಯುತ ನಾಗರಿಕರಾಗಿ ನಾವು ಕೋವಿಡ್ ಸಮಯದಲ್ಲಿ ಸಾದ್ಯವಾಗುವ ಎಲ್ಲಾ ಸುರಕ್ಷತೆ ತೆಗೆದುಕೊಳ್ಳುವ ಪ್ರತೀಜ್ಞೆ ಮಾಡಿದ್ದೇವೆ.ಎಲ್ಲಾ ಸಿನಿಮಾ ಪ್ರಿಯರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತೇವೆ.ಸರ್ಕಾರ ಕೂಡಲೇ ಶೇ.100 ಪ್ರೇಕ್ಷಕರ ಸಾಮರ್ಥ್ಯಕ್ಕೆ ಅವಕಾಶ ಮಾಡಿಕೊಡಿ.

  • ಕಿಚ್ಚ ಸುದೀಪ್, ಹಿರಿಯ ನಟ,

ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ..

ನಮ್ಮಲ್ಲಿ ಜಾಗೃತಿ ಮೂಡಿದೆ,ಜವಾಬ್ದಾರಿಯು ಇದೆ.ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ‌. ನಿಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು ಮುಳುವಾಗಬಾರದು.ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ.ಎಲ್ಲರಿಗೂ ದುಡಿಯುವ ಅವಕಾಶವಿದೆ.ಚಿತ್ರರಂಗಕ್ಕೆ ಯಾಕಿಲ್ಲ.ಸೂಚನೆ ಕೊಡದೆ ಜಾರಿ ಮಾಡಿರುವ ಈ ನಿರ್ಬಂದನೆಗಳಿಂದ ಚಿತ್ರರಂಗ ಬಲಿ..

  • ಯಶ್,ನಟ

ನಿಮಯ ಹಿಂಪಡೆಯಿರಿ

ಸಿನಿಮಾ ಮನರಂಜನೆಗಾಗಿರಬಹುದು. ಅದರ ಜೊತೆಜೊತೆಗೆ ನೀವು ಊಹಿಸಲು ಸಾಧ್ಯವಿಲ್ಲದಷ್ಟು ಕುಟುಂಬಗಳಿಗೆ ಅದುವೆ ಹೊಟ್ಟೆ-ಬಟ್ಟೆ..
ದಯವಿಟ್ಟು ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಅನುಮತಿಯ ನಿಯಮವನ್ನು ಹಿಂಪಡೆಯಿರಿ. ಸಿನಿಮಾ ಉಳಿಸಿ, ಚಿತ್ರಮಂದಿರಗಳಲ್ಲಿ ಶೇ.100 ರ ಪ್ರೇಕ್ಷಕರ ಸಾಮರ್ಥ್ಯ ಕ್ಕೆ ಅವಕಾಶ ಮಾಡಿಕೊಡಿ.

  • ನೀನಾಸಂ‌ ಸತೀಶ್,ನಟ

ಅನ್ಯಾಯ

ನೋಟೀಸ್ ನೀಡದೆ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಾಮರ್ಥ್ಯ ಶೇ.50ಕ್ಕೆ ಇಳಿಸಿರುವುದು ಅನ್ಯಾಯ.ಮನರಂಜನೆ ಸಿನಿಮಾ ರಂಗದ ಜೀವನಾಧಾರ.ಅದನ್ನು ಮರೆಯದಿರಿ
ಕನ್ನಡ ಚಿತ್ರರಂಗ ಉಳಿಯುವ ನಿಟ್ಟಿನಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ರಷ್ಡು ಅನುಮತಿಯನ್ನು ಕೊಡಬೇಕು ಎಂದು ರಾಜ್ಯ ಸರ್ಕಾರದಲ್ಲಿ ವಿನಂಬ್ರ ಮನವಿ.

  • ರಕ್ಷಿತ್ ಶೆಟ್ಟಿ,ನಟ.

ನಿರ್ಧಾರ ಸಮ್ಮತವಲ್ಲ

ಸರ್ಕಾರದ ಆದೇಶದ ಉದ್ದೇಶಕ್ಕೆ ನನ್ನ ಬೆಂಬಲವಿದೆ ಆದರೆ ಮುನ್ಸೂಚನೆ ನೀಡದೆ ಜಾರಿ ಮಾಡಿದ ನಿರ್ಧಾರವು ಸಮ್ಮತವಲ್ಲ,. ಯುವ ರತ್ನ ಸಿನಿಮಾ ಎಷ್ಟೋ ವರ್ಷಗಳ ತಪಸ್ಸು,ಇಡೀ ತಂಡದ ಬದುಕು.ಇದು. ಚಿತ್ರಮಂದಿರದಲ್ಲಿ 100ರಷ್ಚು ಆಸನ ಭರ್ತಿಗೆ ಅವಕಾಶ ಮಾಡಿಕೊಡಿ ಕನ್ನಡ ಸಿನಿಮಾಗಳನ್ನು ಬದುಕಿಸಿಕೊಡಿ.

  • ಪ್ರೇಮ್ ,ನಿರ್ದೇಶಕ.

ಯುವ ರತ್ನ ಸಂದೇಶಾತ್ಮಕ‌ ಚಿತ್ರ

ಎಲ್ಲ ವರ್ಗದ ಪ್ರೇಕ್ಷಕರಿಂದ ಪ್ರಶಂಸೆ ಪಡೆದು.ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ ಸಾರುವ ಸಿನಿಮಾ ಯುವರತ್ನನಿಗೆ ಶೇಕಡ 100 ರಷ್ಟು ಆಸನ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ.

  • ದಿ‌ನಕರ್ ತೂಗುದೀಪ, ನಿರ್ದೇಶಕ

ದುರದೃಷ್ಟಕರ

ಚಿತ್ರಮಂದಿರಗಳಲ್ಲಿ ಶೇ.50ಕ್ಕೆ ಇಳಿಸಿರುವುದು ದುರದೃಷ್ಟಕರ.ನಿಯಮಗಳನ್ನು ಪಾಲಿಸೋಣ.ಅದೇ ರೀತಿ ಕಠಿಣ ಪರಿಶ್ರಮವೂ ವ್ಯರ್ಥವಾಗಬಾರದು.

ಮನೋರಂಜನ್, ನಟ

ಇದಲ್ಲದೆ ನಿರ್ದೇಶಕರಾದ ಚೇತನ್ ಕುಮಾರ್ ,ಕೃಷ್ಣಾ,ರಿಷಬ್ ಶೆಟ್ಟಿ,ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಟಿ ಮಾಳವಿಕಾ ಅವಿನಾಶ್‌ ಸೇರಿದಂತೆ ಚಿತ್ರರಂಗದ ಅನೇಕ ನಟ,ನಟಿಯರು,ತಂತ್ರಜ್ಞರು ಪುನೀತ್ ರಾಜ್ ಕುಮಾರ್ ಅಭಿನಯದ ಯುವ ರತ್ಮ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ