99 ಸಾವಿರ ರೂ.ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿ ಕಳವು

ಕಲಬುರಗಿ,ಜೂ.5-ಮನೆ ಕಟ್ಟಲೆಂದು ತಂದಿರಿಸಿದ್ದ 99,848 ರೂ.ಮೌಲ್ಯದ ವಿದ್ಯುತ್ ಎಲೆಕ್ಟ್ರಿಕಲ್ ಸಾಮಗ್ರಿ ಕಳವು ಮಾಡಿರುವ ಘಟನೆ ಇಲ್ಲಿನ ಬನಶಂಕರಿ ನಗರದಲ್ಲಿ ನಡೆದಿದೆ.
ಕೆ.ಎಸ್.ಆರ್.ಟಿ.ಸಿ.ಯಲ್ಲಿ ಸಂಚಾರ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಹಣಮಂತರಾವ ಆಲಗುಡ್ ಅವರು ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹಣಮಂತರಾವ ಆಲಗುಡ ಅವರು ಬನಶಂಕರಿ ನಗರದಲ್ಲಿ ಮನೆ ನಿರ್ಮಿಸುತ್ತಿದ್ದು, ಸದರಿ ಮನೆಗೆ ಬೇಕಾದ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ತಂದು ಮನೆಯ ಮೂರನೇ ಮಹಡಿಯಲ್ಲಿರಿಸಿ ಬೀಗ ಹಾಕಿದ್ದರು. ಕಳ್ಳರು ಬೀಗ ಮರಿದು 99,848 ರೂ.ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.