950ಗ್ರಾಮ ಒಣಗಿದ ಗಾಂಜಾ ಒಂದು ಬೈಕ್ ವ್ಯಕ್ತಿ ಬಂಧನ

ಇಂಡಿ : ಸೆ.26:ಅಬಕಾರಿ ಆಯುಕ್ತರು ಅಪರಾಧ ಕೇಂದ್ರಸ್ಥಾನ ಬೆಳಗಾವಿ ಶ್ರೀ ಎಮ್ ಎಚ್ ಪಡಸಲಗಿ ಹಾಗೂ ಅಬಕಾರಿ ಉಪ ಆಯುಕ್ತರು ವಿಜಯಪುರ ವಿಜಯಕುಮಾರ್ ಹಿರೇಮಠ ಅವರು ಅಬಕಾರಿ ಉಪ ನಿರೀಕ್ಷಿಕರು ಇಂಡಿ ವಲಯ ತಂಡ ರಚಿಸಿ ಖಚಿತ ಮಾಹಿತಿ ಮೇರೆಗೆ ಹಿರೇರೂಗಿ ಹತ್ತಿರ ಶಾಂತಿ ನಗರದ ಬಸ್ ನಿಲ್ದಾಣದ ಎದುರುಗಡೆ ಜಾಲ ಬೀಸಿ ಹಿರೇರೂಗಿ ಗ್ರಾಮದ ಯಲ್ಲಪ್ಪ ತಂದೆ ಪ್ರಭು ಮೂಲಿಮನಿ ವಯಸ್ಸು 27ವರ್ಷ ಎಂಬಾತನದಿಂದ ಅನಾದಿಕ್ರತ
ವಾಗಿ ಸಂಗ್ರಹಿಸಿದ 950ಗ್ರಾಮ ವಣ ಗಾಂಜಾ ಹಾಗೂ ಒಂದು ದ್ವಿ ಚಕ್ರ ವಾಹನ ವಶ ಪಡಿಸಿಕೊಂಡಿದ್ದಾರೆ.950ಗ್ರಾಮ ವಣ ಗಾಂಜಾ ಹಾಗೂ ಒಂದು ದ್ವಿ ಚಕ್ರವಾಹನದ ಅಂದಾಜು ಕಿಮತ್ತು ಒಂದು ಲಕ್ಷ ರೂ ಗಳು ಎಂದು ತಿಳಿದುಬಂದಿದೆ. ಅಬಕಾರಿ ಉಪ ನಿರೀಕ್ಷಿಕರು ಶ್ರೀ ವಿಜಯಕುಮಾರ್ ಹಿರೇಮಠ ಅವರ ಫಿರ್ಯಾದಿ ಮೆರಗೆ ಶ್ರೀ ಎಮ್ ಎಚ್ ಪಡಸಲಗಿ ಅವರು ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ. ದಾಳಿಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳು ಶ್ರೀ ಸಂಜೆವಕುಮಾರ ಹೂವಿನವರ, ಶ್ರೀ ಶಿವರುದ್ರ ಟಿ ದಳವಾಯಿ, ಶ್ರೀ ಮಂಜುನಾಥ್ ಬಡಿಗೇರ ಇದ್ದರು.