ನಗರದ ದಾಜೀಬಾನ್ ಪೇಟೆಯ ಎಸ್. ಎಸ್. ಕೆ. ಪಂಚ ಟ್ರಸ್ಟ್ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವವನ್ನು , ಶ್ರೀ ಮಹಾರಾಜರ ತೈಲ ಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಸಂಸ್ಥೆಯ ಉಪ ಮುಖ್ಯ ಧರ್ಮದರ್ಶಿ ನೀಲಕಂಠ ಪಿ ಜಡಿ, ಗೌರವ ಕಾರ್ಯದರ್ಶಿ ಭಾಸ್ಕರ ಎನ್ ಜಿತೂರಿ, ಗೌರವ ಸಹ ಕಾರ್ಯದರ್ಶಿ ಟಿ ಎನ್ ಧೋಂಗಡಿ, ಟ್ರಸ್ಟಿಗಳಾದ ಎ. ಕೆ. ಕಲಬುರ್ಗಿ, ಎ.ಪಿ.ಪವಾರ, ಎನ್.ಆರ್.ಹಬೀಬ, ಆರ್.ಡಿ.ರತನ, ಸುಭಾಷ್ ಧೋಂಗಡಿ, ತಾರಾನಾಥ ಪೂಜಾರಿ, ಶ್ರೀನಿವಾಸ ರತನ, ವೆಂಕಟೇಶ್ ಪೂಜಾರಿ, ರಮೇಶ್ ಪೂಜಾರಿ, ನಾಗರಾಜ ಕಲಬುರ್ಗಿ, ಮಂಜುನಾಥ ಪೂಜಾರಿ ರಮೇಶ ಪಾಟೀಲ,ಮಾಧುಸಾ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.