ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೈಸೂರು ಜಿಲ್ಲಾ ಸಮಿತಿ) ವತಿಯಿಂದ ಒಳಮೀಸಲಾತಿಯ ಅಸ್ತ್ರ-ದಲಿತರ ಮುಂದಿನ ಸವಾಲುಗಳು ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಎಸ್.ಮಂಜುನಾಥ್ (ಕೂರ್ಗಳ್ಳಿ) ವಿಜಯ ನರಸಿಂಹ, ಅರಕಲವಾಡಿ ನಾಗೇಂದ್ರ, ಕಾಂತರಾಜು ಹುಣಸೂರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.