922 ಗುತ್ತಿಗೆ ನೌಕರರಿಗೆ ಮಾಸಿಕ ಅಪಾಯ ಭತ್ಯೆ ಘೋಷಣೆ

ಬೆಂಗಳೂರು, ಜೂ.2- ರಾಜ್ಯದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 922 ಗುತ್ತಿಗೆ ನೌಕರರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾಸಿಕ ಅಪಾಯ ಭತ್ಯೆ ಘೋಷಿಸಿದೆ.

ಸಂಶೋಧನಾ ವಿಜ್ಞಾನಿ, ಸಂಶೋಧನಾ ಸಹಾಯಕ, ಪ್ರಯೋಗಾಲಯ ತಂತ್ರಜ್ಞ, ಡೇಟಾ ಎಂಟ್ರಿ ಆಪರೇಟರ್‌ ಗಳಿಗೆ 5000 ರೂಪಾಯಿ‌ ಭತ್ಯೆ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಕ ಸಚಿವ ಡಾ.‌ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಈಗಾಗಗಲೇ ದಾದಿಯರಿಗೆ 8000 ರೂಪಾಯಿ ಮತ್ತು ಡಿ ಗ್ರೂಪ್ ನೌಕರರಿಗೆ 10000 ರೂ ಅಪಾಯ ಭತ್ಯೆ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ಲೆಕ್ಕಿಸದೆ ಕೆಲಸ ಮಾಡುತ್ತಿರುವ ಮಂದಿಗೆ ಅಪಾಯ ಭತ್ಯೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು