ನಗರದ ವಿಶ್ವೇಶ್ವರ ನಗರದಲ್ಲಿ ಸಿದ್ದು ಮೋಗಲಿಶೆಟ್ಟರ ಅವರ ನಿವಾಸದಲ್ಲಿ ಗೌರವ ಡಾಕ್ಟರೇಟ್ ಪುರಸ್ಕøತರಾದ ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಯವರಿಗೆ ಎಲ್.ಐ.ಸಿ ಶಾಖೆ 1 ರ ಅಧಿಕಾರಿಗಳು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಸಿದ್ದು ಮೋಗಲಿಶೆಟ್ಟರ ದಂಪತಿಗಳನ್ನು ಸನ್ಮಾನಿಸಲಾಯಿತು. ಸಂಘದ ಪ್ರಚಾರಕ ನಾಗರಾಜ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ವಿರೇಶ ಸಂಗಳದ, ರವಿ ನಾಯಕ, ಪ್ರಕಾಶ ದೇಶಪಾಂಡೆ, ಜಯಂತ ಕೆರ್., ಜಗದೀಶ ಸುಳ್ಳದ, ವಿಜು ಶೆಟ್ಟರ್, ಶ್ರೀಕಾಂತ, ಎಸ್.ಪಿ.ಜೋಶಿ, ನೀಲಗುಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.