ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಪುಟ್ಟಣ್ಣ, ಸುಶೀಲ್ ಜಿ.ನಮೋಶಿ, ಚಿದಾನಂದ ಗೌಡ ಹಾಗೂ ಎಸ್.ವಿ. ಸಂಕನೂರ್ ಅವರು ಇಂದು ವಿಧಾನ ಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಸಚಿವ ಜಗದೀಶ್ ಶೆಟ್ಟರ್ ಅವರು ಈ ನಾಲ್ವರು ಸದಸ್ಯರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.