ಬೆಳಗಾವಿಯ ಪೀರನವಾಡಿಯಲ್ಲಿ ್ಲ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಅವಮಾನ ಮಾಡಿ ಅದನ್ನು ವಿಡಿಯೋ ಮೂಲಕ ಹರಿಬಿಟ್ಟಿರುವ ದುಷ್ಕರ್ಮಿಗಳ ಕ್ರಮ ಖಂಡಿಸಿ ಬುಧವಾರ ಲಕ್ಷ್ಮೇಶ್ವರದ ಅಖಿಲ ಕರ್ನಾಟಕ ಸಂಗೊಳ್ಳಿ ರಾಯಣ್ಣ ಯುವಶಕ್ತಿ ವೇದಿಕೆಯ ಘಟಕದ ಕಾರ್ಯಕರ್ತರು ತಹಶೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಸುರೇಶ ಹಟ್ಟಿ, ನೀಲಪ್ಪ ಪಡಗೇರಿ ಯಂಕಪ್ಪ ಬಸಾಪುರ, ಮಂಜು ಮುಳಗುಂದ, ಗೂಳಪ್ಪ ಕಡ್ಡಿಪೂಜಾರ, ಬಸವರಾಜ ಹಿರೇಮನಿ, ಮಹಾಂತೇಶ ಬಸಾಪುರ, ಸಿದ್ದಪ್ಪ ಕರಿಗಾರ, ಗಂಗಾಧರ ಕೊಂಚಿಗೇರಿಮಠ, ಕೋಟೆಪ್ಪ ನಂದೆಣ್ಣವರ, ಆನಂದ ಗಡದವರ, ಚನ್ನಬಸಯ್ಯ ಗಡ್ಡದೇವರಮಠ, ಗಂಗಾಧರ ಹಳ್ಳಿಕೇರಿ, ರವಿಕುಮಾರ ಕೋರಿ, ಸೋಮಣ್ಣ ಬಳಗಾನೂರ ಇದ್ದರು.