903ನೇ ಅಂಬಿಗರ ಚೌಡಯ್ಯ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಕುರುಗೋಡು, ಜ,21: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಅಂಬಿಗರ ಚೌಡಯ್ಯ  ಭಾವಚಿತ್ರಕ್ಕೆ  ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಅವರು ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ , ಗ್ರೇಡ್-2 ತಹಶೀಲ್ದಾರ್ ಬಿ.ಮಲ್ಲೇಶಪ್ಪ, ಕಚೇರಿ ಶಿರಸ್ತೆದರರು, ಸಿಬ್ಬಂದಿಗಳು, ಸಿ.ಪಿ.ಐ.ಎಮ್ ಜಿಲ್ಲಾಧ್ಯಕ್ಷ ಶಿವಶಂಕರಿ, ಎಸ್ಟಿ ಮೋರ್ಚಾ ತಾಲೂಕು ಅಧ್ಯಕ್ಷ ಕೋಮಾರೆಪ್ಪ,  ಮತ್ತು ಗಂಗಮತ ಸಮುದಾಯದ ಮುಖಂಡರು, ಇತರರು ಉಪಸ್ಥಿತರಿದ್ದರು.