’90 ಬಿಡಿ ಮನೀಗ್ ನಡಿ’ ಬಿಡುಗಡೆ

ಬೀದರ್:ಜೂ.30: ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತೇಗಂಪುರದ ಹಿರಿಯ ಕಲಾವಿದ ವೈಜಿನಾಥ ಬಿರಾದಾರ ನಾಯಕ ನಟನಾಗಿ ನಟಿಸಿರುವ ’90 ಬಿಡಿ ಮನೀಗ್ ನಡಿ’ ಚಲನಚಿತ್ರ ಇಲ್ಲಿಯ ಸಪ್ನಾ ಮಲ್ಟಿಫ್ಲೆಕ್ಸ್‍ನಲ್ಲಿ ಗುರುವಾರ ಬಿಡುಗಡೆಗೊಂಡಿತು.

ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಪೀಠಾಧಿಪತಿ ಹಾವಲಿಂಗೇಶ್ವರ ಶಿವಾಚಾರ್ಯ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು.

90 ಬಿಡಿ ಮನೀಗ್ ನಡಿ ಚಿತ್ರ ರಾಜ್ಯದಾದ್ಯಂತ ಏಕಕಾಲಕ್ಕೆ ಬಿಡುಗಡೆಗೊಂಡಿದೆ. ಉಮೇಶ ಬಾದರದಿನ್ನಿ, ನಾಗರಾಜ ಅರೆಹೊಳೆ ರಚಿಸಿ, ನಿರ್ದೇಶಿಸಿದ್ದಾರೆ. ರತ್ನಮಾಲಾ ಬಾದರದಿನ್ನಿ ಚಿತ್ರದ ನಿರ್ಮಾಪಕಿಯಾಗಿದ್ದಾರೆ. ಜಿಲ್ಲೆಯ ಹಿರಿಯ ಕಲಾವಿದ ವೈಜಿನಾಥ ಬಿರಾದಾರ ನಾಯಕ ನಟನಾಗಿ ನಟಿಸಿರುವ ಕಾರಣ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಯುವ ಮುಖಂಡ ಶಿವಕುಮಾರ ಪಾಟೀಲ ತೇಗಂಪುರ ಮನವಿ ಮಾಡಿದರು.

ಸಾಯಗಾಂವ್‍ನ ಶಿವಾನಂದ ದೇವರು, ಡಾ. ಬಸವರಾಜ ಬಲ್ಲೂರ, ಡಾ. ಸಿ.ಆನಂದರಾವ್, ಎಂ.ಎಸ್. ಮನೋಹರ, ಬಸವರಾಜ ಭತಮುರ್ಗೆ, ಸಿದ್ಧಾರೂಢ ಭಾಲ್ಕೆ, ಬಸವರಾಜ ಕರೆಪ್ಪನೋರ, ಪವನ್ ಬಿರಾದಾರ, ಸುಭಾಷ್ ಪಾಟೀಲ, ಮೊದಲಾದವರು ಇದ್ದರು.