9.50 ಕೋಟಿ ರೂ. ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ

ತಾಳಿಕೋಟೆ:ಮಾ.17: ಹಿಂದೂ-ಮುಸ್ಲಿಂ ನಾವೇಲ್ಲರೂ ಒಂದೇ ಆಗಿದ್ದೇವೆ 5 ವರ್ಷಗಳ ಕಾಲ ನಾವು ಒಂದಾಗಿರುತ್ತೇವೆ ಚುನಾವಣೆ ಸಂದರ್ಬದಲ್ಲಿ 5 ದಿನ ನಮ್ಮನ್ನು ಒಡೆದು ಆಳುವಂತಹ ಕೆಲಸ ಮಾಡುತ್ತಾರೆ ಆ 5 ದಿನಗಳು ನಾವೇಲ್ಲರೂ ಒಂದಾಗಿ ಸಮಾಜದ ಬಗ್ಗೆ ಚಿಂತನೆ ಉಳ್ಳುವಂತಹ ವ್ಯಕ್ತಿಗೆ ನೀವು ಮತವನ್ನು ದಾನ ಮಾಡಿದರೆ ಇನ್ನಷ್ಟು ಅಭಿವೃದ್ದಿ ಪೂರ್ವಕ ಕೆಲಸ ಮಾಡಲು ಸಾಧ್ಯವೆಂದು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹೇಳಿದರು.

2022-23ನೇ ಸಾಲಿನ ಎಸ್.ಎಫ್.ಸಿ.ವಿಶೇಷ ಅನುದಾನ 7.93 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಜನರನ್ನು ಪ್ರೀತಿಸುವ ಅಭಿವೃದ್ದಿಗೆ ಒತ್ತುಕೊಡುವ ವ್ಯಕ್ತಿಗೆ ನೀವು ಆಶಿರ್ವಾದ ಮಾಡಿದರೆ ದೇಶಕ್ಕೆ ಒಳ್ಳೆಯ ಸಂದೇಶವನ್ನು ಕೊಡಬಹುದಾಗಿದೆ ಚುನಾವಣೆ ಸಂದರ್ಬದಲ್ಲಿ ಮತದಾನದ 5 ದಿನಗಳಲ್ಲಿ ನಮ್ಮನ್ನು ಒಡೆದು ಆಳುತ್ತಾರೆ ಅದಕ್ಕೆ ಅವಕಾಶ ಕೊಡದೇ ಒಂದಾಗಿ ನಿಲ್ಲುವಂತಹ ಕೆಲಸ ಮಾಡಬೇಕೆಂದ ಅವರು ನಾನು ಎಲ್ಲರಿಗೂ ಮುಕ್ತವಾಗಿ ಸಿಗುವಂತಹ ಶಾಸಕನಾಗಿದ್ದೇನೆ ನನ್ನ ಮನೆಗೆ ಸಾಮಾನ್ಯ ವ್ಯಕ್ತಿ ಬಂದರೂ ಕೂಡಾ ಅವನನ್ನು ಮಾತನಾಡಿಸಿ ಅವರ ಕಷ್ಟಕ್ಕೆ ಸ್ಪಂದಿಸುವಂತಹ ಕೆಲಸ ಮಾಡಿದ್ದೇನೆ ಇವತ್ತಿಗೂ ನನ್ನ ಮನೆಗೆ ದಿನಕ್ಕೆ ಕನಿಷ್ಟ 1 ಸಾವಿರ ಜನ ಬಂದು ನನ್ನನ್ನು ಕಾಣುತ್ತಾರೆಂದರು. ತಾಳಿಕೋಟೆ ಪಟ್ಟಣ ಅಭಿವೃದ್ದಿಯಿಂದ ಹಿಂದೂಳಿಯಲು ಕಾರಣವೇನೆಂಬುದು ನೀವು ಅರ್ಥ ಮಾಡಿಕೊಳ್ಳಬೇಕು ಕಳೆದ 25 ವರ್ಷಗಳ ಈ ಮತಕ್ಷೇತ್ರವನ್ನು ಆಳಿದವರು ಏನೇಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಬಹುದಿತ್ತು ಎಂಬುದನ್ನು ಎಲ್ಲರೂ ವಿಚಾರ ಮಾಡಬೇಕಿದೆ ನಾನು ಕೇವಲ 5 ವರ್ಷಗಳಲ್ಲಿ ಇಷ್ಟೊಂದು ಅನುದಾನ ತಂದು ಅಭಿವೃದ್ದಿ ಕೆಲಸಗಳನ್ನು ಮಾಡಿರುವದು ಕಣ್ಣಿಗೆ ಕಾಣುತ್ತಿದೆ ನಾನು ಒಂದು ಮಾತನ್ನು ವಿಸ್ವಾಸದಿಂದ ಹೇಳಲು ಬಯಸುತ್ತೇನೆ ನಾನು ಎಲ್ಲಿಯವರೆಗೂ ರಾಜಕಾರಣದಲ್ಲಿ ಇರುತ್ತೇನೆ ಅಲ್ಲಿಯವರೆಗೆ ಹಿಂದೂಗಳನ್ನು ಮುಸ್ಲಿಂ ಬಾಂದವರನ್ನು ಬೇರ್ಪಡಿಸುವಂತಹ ನೀಚ ರಾಜಕಾರಣ ನಾನು ಎಂದು ಮಾಡುವದಿಲ್ಲಾ ಎಲ್ಲರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಹೋಗುವಂತಹ ಕೆಲಸ ಮಾಡುತ್ತೇನೆಂದರು.

ಮೊದಲನೇಯ ಹಂತದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕೂಡಲೇ 10 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದೆ ಅದೂ ಕಂಪ್ಲೀಟ್ ಆಗಿದೆ ಎರಡನೇ ಭಾರಿ ನಗರೋತ್ತಾನ ಯೋಜನೆಯಡಿ 10 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇ ಅದೂ ಸಂಪೂರ್ಣ ಮುಗಿಯುವ ಹಂತಕ್ಕೆ ಬಂದಿದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಮತ್ತೇ 15 ಕೋಟಿ ರೂ. ವಿಶೇಷ ಅನುದಾನ ಕೊಟ್ಟಿದ್ದಾರೆ ಅದರಲ್ಲಿ 9.50 ಕೋಟಿ ರೂ. ಅನುದಾನವನ್ನು ತಾಳಿಕೋಟೆ ನಗರದ ಆಂತರಿಕವಾಗಿ ಬಡಾವಣೆಗಳಲ್ಲಿಯ ರಸ್ತೆಗಳ ಅಭಿವೃದ್ದಿಗೆ ಚಾಲನೆ ನೀಡಿದ್ದೇನೆ ಇದು ಅಲ್ಲದೇ 5 ಕೋಟಿ ರೂ. ಎಸ್.ಕೆ.ಕಾಲೇಜ್‍ದಿಂದ ಬಸ್ ಘಟಕದ ವರೆಗೆ ಮುಖ್ಯ ರಸ್ತೆ ಅಗಲಿಕರಣ ಮಾಡಿ ಅಭಿವೃದ್ದಿ ಮಾಡಿ ರಸ್ತೆ ಮಧ್ಯ ಡಿವ್ಹಾಡರ್ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ ಇದು ಅಲ್ಲದೇ 1.50 ಕೋಟಿ ರೂ. ಹೊಸ ಬಡಾವಣೆಗಳಲ್ಲಿ ರಸ್ತೆ ಅಭಿವೃದ್ದಿಗೆ ಬಳೆಸಾಗುತ್ತಿದೆ ಪಟ್ಟಣದ ಎಲ್ಲ ರಸ್ತೆಗಳು ಅಭಿವೃದ್ದಿ ಪಡಿಸುವ ಕಾರ್ಯ ಬರದಿಂದ ನಡೆದಿದೆ ತಾಳಿಕೋಟೆ ನಗರಕ್ಕೆ 24><7 ಕುಡಿಯುವ ನೀರಿನ ಯೋಜನೆಗೆ ಸರ್ಕಾರವು ಮಂಜೂರು ನೀಡಿದೆ ಅದೂ ಕೂಡಾ ಸೀಘ್ರದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇನೆಂದರು. ವಿಶೇಷವಾಗಿ ಅಲ್ಪಸಂಖ್ಯಾತ ಬಂದುಗಳ ಈದ್ಗಾ ಮೈಧಾನದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಅನುದಾನವನ್ನು ಒದಗಿಸಿದ್ದೇನೆ ಅದನ್ನು 2 ದಿನದಲ್ಲಿ ಚಾಲನೆ ನೀಡಲಿದ್ದೇನೆಂದರು.

ಮುಸ್ಲಿಂ ಸಮಾಜದ ಮುಖಂಡ ಎ.ಎನ್.ಮುದ್ನಾಳ ಅವರು ಮಾತನಾಡಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಶಾಸಕರಾದ ಮೇಲೆ ದಾನಿಗಳಾಗಿಲ್ಲಾ ಅವರು ರಾಜಕಾರಣಕ್ಕೆ ಬರುವದಕ್ಕಿಂತಲೂ ಮೊದಲು ದಾನಿಗಳಾಗಿದ್ದಾರೆ 2003ರಲ್ಲಿ ಮುಸ್ಲಿಂ ಬಾಂದವರೆಲ್ಲರೂ ಸೇರಿ ಅವರ ಬಳಿ ಹೋಗಿ ಉರ್ದು ಶಾಲೆಯ ಕಟ್ಟಡಕ್ಕೆ ಜಾಗೆ ಬೇಕಿದೆ ಜಾಗೆ ಖರೀದಿಗೆ ಆ ಸಮಯದಲ್ಲಿ 1 ಲಕ್ಷ ರೂ. ಕೇಳಿದಾಗ ಮನಸ್ಪೂರ್ವಕವಾಗಿ ಹಣವನ್ನು ನೀಡಿ ಮುಸ್ಲಿಂ ಸಮಾಜದ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಶಾಸಕರಾದ ಮೇಲೆಯೂ ಕೂಡಾ ಮುಸ್ಲಿಂ ಸಮುದಾಯದ ಏಳಿಗೆ ಕುರಿತು ಸಾಕಷ್ಟು ಅನುದಾನವನ್ನು ನೀಡಿದ್ದಾರೆ ಯಾವುದೇ ಸಮಯದಲ್ಲಿಯೂ ಹಿಂದೂ-ಮುಸ್ಲಿಂರನ್ನು ಬೇರ್ಪಡಿಸಿ ರಾಜಕಾರಣ ಮಾಡಿಲ್ಲಾ ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗುವಂತಹ ಕಾರ್ಯ ಮಾಡಿದ್ದಾರೆ ಅವರ ಬೆನ್ನೇಲುಭಾಗಿ ಈ ಭಾರಿಯ ಚುನಾವಣೆಯಲ್ಲಿ ನಿಲ್ಲುತ್ತೇವೆಂದರು.

ಇದೇ ಸಮಯದಲ್ಲಿ ಬಡಾವಣೆಗಳ ನಾಗರಿಕರ ವತಿಯಿಂದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ಪುರಸಭಾ ಅಧ್ಯಕ್ಷ ಸಂಗಮೇಶ ಇಂಗಳಗಿ, ಸದಸ್ಯರಾದ ವಾಸುದೇವ ಹೆಬಸೂರ, ಜೈಸಿಂಗ್ ಮೂಲಿಮನಿ, ಅಣ್ಣಾಜಿ ಜಗತಾಪ, ಮುದಕಣ್ಣ ಬಡಿಗೇರ, ಪರಶುರಾಮ ತಂಗಡಗಿ, ಮುಖಂಡರಾದ ಮಾಸುಮಸಾಬ ಕೇಂಭಾವಿ, ಖಾಜಾಹುಸೇನ ಡೋಣಿ, ಎ.ಎನ್.ಮುಲ್ಲಾ, ಭೀಮಣ್ಣ ಹಡಪದ, ಶಿವಶಂಕರ ಹಿರೇಮಠ, ವಿಠ್ಠಲ ಮೋಹಿತೆ, ಕಾಶಿನಾಥ ಸಜ್ಜನ, ರಾಘವೇಂದ್ರ ವಿಜಾಪೂರ, ಸಂತೋಷ ಘ್ಯಾರಿ, ಡಿ.ಕೆ.ಪಾಟೀಲ, ಎಸ್.ಎಸ್.ಅಂಗಡಿ, ನಾಗಪ್ಪ ಚಿನಗುಡಿ, ಮೈನುದ್ದೀನ ಕೊರ್ತಿ, ಬಡಗಣ ಸಾಹುಕಾರ, ಸನಾ ಕೇಂಭಾವಿ, ಪರಶುರಾಮ ಕಟ್ಟಿಮನಿ, ಗೈಬೂಸಾ ಮಕಾಂದಾರ, ಮುಖ್ಯಾಧಿಕಾರಿ ಸುರೇಶ ನಾಯಕ, ಕಿರಿಯ ಅಭಿಯಂತರ ಶಂಕರಗೌಡ ಪಾಟೀಲ, ಮೊದಲಾದವರು ಇದ್ದರು.

ಇದೇ ದಿ.21 ರಂದು ಸಿಎಂ ಬೊಮ್ಮಾಯಿ ಆಗಮನ

ಬಾಕ್ಸ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ 21 ನೇ ತಾರೀಖು ಮದ್ಯಾಹ್ನ 2 ಗಂಟೆಗೆ ಮತಕ್ಷೇತ್ರದ ನಾಲತವಾಡ ಪಟ್ಟಣಕ್ಕೆ ಆಗಮಿಸಲಿದ್ದಾರೆ ಅಲ್ಲಿ ಭಹಿರಂಗ ಸಭೆ ಏರ್ಪಡಿಸಲಾಗಿದೆ ಇದರ ಜೊತೆಯಾಗಿ ಎಲ್ಲ ಸರ್ಕಾರಿ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಸಲಿದ್ದಾರೆ ಇನ್ನೂ ಮುಗಿದಿರುವ ಕಾಮಗಾರಿಗಳಿಗೆ ಉದ್ಘಾಟನೆಯನ್ನು ಮಾಡಲಿದ್ದಾರೆಂದು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಪತ್ರಿಕೆ ಮಾಹಿತಿ ನೀಡಿದರು.


 ಅಲ್ಪಸಂಖ್ಯಾತ ಬಂದುಗಳಲ್ಲಿ ಮನವಿ ಮಾಡುತ್ತೇನೆ ಈ ಭಾರಿಯ ಚುನಾವಣೆಯಲ್ಲಿ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಡಬೇಕಾಗಿದೆ ಹಿಂದೂ-ಮುಸ್ಲಿಂ ಬೇದಭಾವ ಮಾಡಿ ಒಡೆದಾಳುವ ರಾಜಕಾರಣಕ್ಕೆ ತಿಲಾಂಜಲಿ ಇಟ್ಟಿದ್ದಾರೆಂಬುದು ವಿಧಾನಸಭೆಯಲ್ಲಿ ನಿಮ್ಮ ದ್ವನಿಯಾಗಿ ನಾನು ಸಂದೇಶ ಕೊಡಬೇಕಿದೆ ನನ್ನ ಗೆಲವು ನಿಶ್ಚಿತ ಅದು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಆಗಬೇಕೆಂಬ ಆಸೆಯಾಗಿದೆ ಯಾಕೆಂದರೆ ಸಾಮರಸ್ಯದ ಜೀವನ ಮತ್ತು ಮಾತುಗಳನ್ನು ನಿಮ್ಮ ಪರವಾಗಿ ವಿಧಾನಸಭೆಯಲ್ಲಿ ದ್ವನಿ ಎತ್ತಲು ಪುಷ್ಟಿ ನೀಡಿದಂತಾಗುತ್ತದೆ.
     ಎ.ಎಸ್.ಪಾಟೀಲ(ನಡಹಳ್ಳಿ)

ಶಾಸಕರು ಮುದ್ದೇಬಿಹಾಳ ಕ್ಷೇತ್ರ


ನಮಗೆ ಪಕ್ಷ ರಾಜಕಾರಣ ಬೇಕಿಲ್ಲಾ ಮತ್ತು ಧರ್ಮಗಳನ್ನು ಒಡೆದು ಆಳುವ ರಾಜಕಾರಣ ಬೇಕಿಲ್ಲಾ ಎಲ್ಲ ಧರ್ಮದವರನ್ನು ಜೊತೆಗೂಡಿಸಿಕೊಂಡು ಹೋಗುವ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರಂತವರು ಬೇಕಿದೆ ಈ ಭಾರಿಯ ಚುನಾವಣೆಯಲ್ಲಿ ಮುಸ್ಲಿಂ ಬಾಂದವರು ಅವರಿಗೆ ವಿಸ್ವಾಸದಿಂದ ನಡಹಳ್ಳಿ ಅವರ ಬೇನೇಲುಬಾಗಿ ನಿಲ್ಲುತ್ತೇವೆ.

ಖಾಜಾಹುಸೇನ ಡೋಣಿ

ಮುಸ್ಲಿಂ ಸಮಾಜದ ಮುಖಂಡ