9, 10ಕ್ಕೆ ರೈತರಿಗೆ ಉಚಿತ ತರಬೇತಿ ಕಾರ್ಯಾಗಾರ

????????????????????????????????????

ಬೀದರ್:ಮಾ.5: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘವು ಮಾ. 9 ಮತ್ತು 10 ರಂದು ಜಿಲ್ಲೆಯ ವಿವಿಧೆಡೆ ಸಮಗ್ರ ಕೃಷಿ, ಸಾವಯವ ಕೃಷಿ ಹಾಗೂ ಗೋಕೃಪಾಮೃತ ಕುರಿತು ರೈತರಿಗೆ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ.

9 ರಂದು ಬೆಳಿಗ್ಗೆ 9.30ಕ್ಕೆ ಬಸವಕಲ್ಯಾಣ ತಾಲ್ಲೂಕಿನ ತಡೋಳಾದ ರಾಚೋಟೇಶ್ವರ ದೇವಸ್ಥಾನ, ಮಧ್ಯಾಹ್ನ 12.30ಕ್ಕೆ ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯ ಹುಗ್ಗೆಳ್ಳಿ ಮಠದ ಕಲ್ಯಾಣ ಕರ್ನಾಟಕ ಸಂಘದ ಸಾಂಸ್ಕøತಿಕ ಭವನ ಹಾಗೂ 10 ರಂದು ಬೆಳಿಗ್ಗೆ 9.30ಕ್ಕೆ ಬೀದರ್ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ಮಹಾದೇವ ನಾಗೂರೆ ಅವರ ತೋಟದಲ್ಲಿ ಗೋಕೃಪಾಮೃತ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರಗತಿ ಪರ ರೈತರು ಮಾರ್ಗದರ್ಶನ ಮಾಡಲಿದ್ದಾರೆ. ರೈತರಿಗೆ ಉಪಯುಕ್ತ ಕಿಟ್ ಕೊಡಲಾಗುವುದು. ಜಿಲ್ಲೆಯ ರೈತರು ಕಾರ್ಯಾಗಾರದ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9742296118, 9480585000 ಅಥವಾ 9448422743ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.