9 ವರ್ಷದಲ್ಲಿ ದೇಶದಲ್ಲಿ ನಿರೀಕ್ಷೆಗೂ ಮೀರಿದ ಕೆಲಸ: ಹರ್ ದೀಪ್ ಸಿಂಗ್ ಪುರಿ

ನವದೆಹಲಿ,ಜೂ.10- ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 9 ವರ್ಷದ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಬದಲಾವಣೆಯಾಗಿದೆ ಎಂದು ಕೇಂದ್ರ ನಗರಾಭಿವೃದ್ದಿ ಸಚಿವ ಹರ್ ದೀಪ್ ಸಿಂಗ್ ಪುರಿ ಇಂದಿಲ್ಲಿ ಹೇಳಿದ್ದಾರೆ.ಭಾರತ, ವಿಶ್ವದಲ್ಲೇ 5ನೇ ಅತಿ ದೊಡ್ಡ ಆರ್ಥಿಕ ದೇಶವಾಗಲು ಕೂಡ ನೆರವಾಗಿದೆ. ಕಳೆದ 9 ವರ್ಷಗಳ ಅವಧಿಯಲ್ಲಿ ದೇಶದ ನೀತಿ ನಿರೂಪಣಾ ಕ್ರಮಗಳು ಬದಲಾಗಿವೆ ಎಂದು ತಿಳಿಸಿದ್ದಾರೆ. 9 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆರ್ಥಿಕತೆ ಚೇತರಿಕೆ ಕಂಡಿದೆ. ಕೋವಿಡ್ ಸೋಂಕಿನ ಸಮಯದಲ್ಲಿ 220 ಕೋಟ ಲಸಿಕೆಗಳನ್ನು ಜನರಿಗೆ ನೀಡುವ ಜೊತೆಗೆ ವಿದೇಶಗಳಿಗೂ ಲಸಿಕೆ ನೀಡಲಾಗಿದೆ ಎಂದರು.2014ರ ತನಕ ದೇಶದಲ್ಲಿ 74 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ ವಿಮಾನ ನಿಲ್ದಾಣಗಳ ಸಂಖ್ಯೆ ಮತ್ತಷ್ಟು ಏರಿಕೆಯಗಿದೆ. ಈಗ ಮತ್ತೆ 74 ವಿಮಾನ ನಿಲ್ದಾಣಗಳು ಹೆಚ್ಚವರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.ದೇಶದಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಕೈಗೆಟಕುವ ದರದಲ್ಲಿ ಔಷಧಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಸ್ವಚ್ಛ ಭಾರತ್, ಉಜ್ವಲ, ಅಟಲ್ ಮಿಷನ್ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಹೆಜ್ಜೆ ಇಟ್ಟಿದೆ ಎಂದು ಅವರು ಹೇಳಿದ್ದಾರೆ.