9 ರಂದು ಮರತೂರದಲಿ ್ಲಅವರಾತ್ರಿ ಹೇಳಿಕೆ

ಕಲಬುರಗಿ,ಫೆ.5: ಶಹಾಬಾದ ತಾಲೂಕು ಮರತೂರನಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಫೆಬ್ರವರಿ 9 ರಂದು ಮನೋಜಕುಮಾರ ಸಾಹು ಜೇವರ್ಗಿಅವರ ವiಹಾಮನೆ ಆವರಣದಲ್ಲಿ ಗೊಲ್ಲಾಳೇಶ್ವರ ಮತ್ತು ಹುಣಚೆರಾಯ ದೇವರ ಸಮನ್ವಯದ ಸೂತ್ರದಲ್ಲಿ ಗ್ರಾಮ ಜಾತ್ರೆ ಜರುಗಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಮಹಾ ಅಭಿಷೇಕ ಪೂಜೆ,ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ದೇವರ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಓಣಿಗಳಲ್ಲಿ ಮೆರವಣಿಗೆ ಸಾಗಿ ಮತ್ತೆ ಸಾಹು ಅವರ ಮನೆ ಆವರಣಕ್ಕೆ ಬಂದು ತಲುಪಲಿದೆ. ನಂತರ ಶರಣಪ್ಪ ಪೂಜಾರಿಯವರ ಮೂಲಕ ವರ್ಷದ ಭವಿಷ್ಯ ಜರುಗಲಿದೆ.