9 ರಂದು ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ

ಇಂಡಿ :ಜ.1:ಅಖಿಲಭಾರತ ಶರಣಸಾಹಿತ್ಯ ಪರಿಷತ್ತ ಹಾಗೂ ಇಂಡಿ ತಾಲೂಕು ಕದಳಿ ವೇದಿಕೆ ಸಹಯೋಗದಲ್ಲಿ ಜ.9 ರಂದು ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಇಂಡಿ ತಾಲೂಕು ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಇಂಡಿ ತಾಲೂಕ ಕದಳಿ ವೇದಿಕೆಯ ಅಧ್ಯಕ್ಷೆ ಗಂಗಾಬಾಯಿ ಗಲಗಲಿ ತಿಳಿಸಿದ್ದಾರೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಥರ್ಗಾ ಗ್ರಾಮದ ವಚನಶ್ರೀ ಮಾತಾಜಿ ಅವರನ್ನು ಆಯ್ಕೆ ಮಾಡಲಾಗಿದೆ.ಸಮ್ಮೇಳನ ಸರ್ವಾಧ್ಯಕ್ಷರನ್ನು ಭೇಟಿಯಾಗಿ ಆಯ್ಕೆಯಾಗಿರುವುದಕ್ಕೆ ಅವರನ್ನು ಸನ್ಮಾನಿಸಿ ಸಮ್ಮೇಳನಕ್ಕೆ ಅವ್ಹಾನಿಸಲಾಗಿದೆ ಎಂದು ಹೇಳಿದರು.

ಕದಳಿ ವೇದಿಕೆ ಕೋಶಾಧ್ಯಕ್ಷೆ ಜಯಶ್ರೀ ಬಿದಾರಾದಾರ,ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಎಂ.ಪಿ.ಬೈರಜಿ,ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ,ಯೋಗ ಗುರು ಬಿ.ಎಸ್.ಪಾಟೀಲ,ಎಸ್.ಕೆ.ಗೊಟ್ಯಾಳ,ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಡಾ.ದೇವೆಂದ್ರ ಬರಡೋಲ ಈ ಸಂದರ್ಭದಲ್ಲಿ ಇದ್ದರು.