9 ಪ್ರಮುಖ ಹೆದ್ದಾರಿ ಯೋಜನೆಗಳಿಗೆ ನಾಳೆ ಶಂಕುಸ್ಥಾಪನೆ

ನವದೆಹಲಿ .ಸೆ. 20 .ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಒಂಬತ್ತು ಪ್ರಮುಖ ಹೆದ್ದಾರಿ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

14,258 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸುಮಾರು 350 ಕಿಲೋಮೀಟರ್ ಉದ್ದದ ಹೆದ್ದಾರಿ ಯೋಜನೆಗಳು ಇವಾಗಿವೆ.

ಬಿಹಾರದ ಸಮಗ್ರ ಅಭಿವೃದ್ಧಿಗೆ ಈ ರಸ್ತೆಗಳು ಉತ್ತಮ ಸಂಪರ್ಕ ಸೌಲಭ್ಯವನ್ನು ಕಲ್ಪಿಸಲು ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಹೇಳಲಾಗಿದೆ.

ನೆರೆ ರಾಜ್ಯಗಳಾದ ಉತ್ತರ ಪ್ರದೇಶ ಜಾರ್ಖಂಡ್ ಮತ್ತಿತರ ರಾಜ್ಯಗಳಿಗೆ ಜನರ ಓಡಾಟ ಮತ್ತು ಸರಕು ಸಾಗಣೆಗೆ ಪೂರಕವಾಗಲಿದೆ ಎಂದು ಹೇಳಲಾಗಿದೆ.

2015ರಲ್ಲಿ ಬಿಹಾರದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು. 50 ನಾಲ್ಕು ಸಾವಿರದ ಏಳು ನೂರು ಕೋಟಿ ರೂಪಾಯಿ ವೆಚ್ಚದ 75 ಯೋಜನೆಗಳು ಪ್ಯಾಕೇಜ್ನಲ್ಲಿ ಒಳಗೊಂಡಿದ್ದವು.

ಈ ಪೈಕಿ ಈಗಾಗಲೇ 13 ಯೋಜನೆಗಳು ಪೂರ್ಣಗೊಂಡಿವೆ 38 ಯೋಜನೆಗಳು ವಿವಿಧ ಹಂತಗಳಲ್ಲಿ ಇವೆಯೆಂದುತಿಳಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಸಂದರ್ಭದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಮೂರು ಬೃಹತ್ ಸೇತುವೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಈ ಮೂಲಕ ಸೇತುವೆಗಳ ನಿರ್ಮಾಣ ಕ್ಷೇತ್ರದಲ್ಲೂ ಹೊಸ ಸಾಧನೆ ಮಾಡಿದಂತಾಗಿದೆ.

ಮೋದಿ ಅವರು ಇದೇ ಸಂದರ್ಭದಲ್ಲಿ ಆಪ್ಟಿಕಲ್ ಫೈಬರ್ ಇಂಟರ್ನೆಟ್ ಸೇವೆಗಳನ್ನು ಉದ್ಘಾಟಿಸಲಿದ್ದಾರೆ. ಯೋಜನೆಗಳಿಂದ ಬಿಹಾರದ 45 ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ಇಂಟರ್ನೆಟ್ ಸೌಲಭ್ಯ ದೊರೆಯಲಿದೆ.