ಹುಮನಾಬಾದ :ಜೂ.22:ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಶಾಲೆಯಲ್ಲಿ 9ನೇಅಂತರಾಷ್ಠ್ರೀಯ ಯೋಗ ದಿನಾಚರಣೆಯ ಕಾಂiÀರ್iಕ್ರಮ ಆಯೋಜಿಸಲಾಗಿತ್ತು. ಶಾಲೆಯ ಏಲ್ಲಾ ಮಕ್ಕಳಿಗೆ ಪ್ರೌಢ ಶಾಲೆಯ ಶಿಕ್ಷಕರಾದ ಶ್ರೀ ದಿನೆಶಕುಮಾರ ಕೊಂಡ ಅವರು ಪ್ರಾಯೊಗಿಕ ಯೋಗ ಶಿಬಿರ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಗುಂಡಯ್ಯಾ ತೀರ್ಥಾ ಆಡಳಿತಾಧಿಕಾರಿಗಳು ಬಸವತೀರ್ಥ ವಿದ್ಯಾಪೀಠ ಹಳ್ಳಿಖೇಡ(ಬಿ) ಇವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಕಾರ, ಸೇವಾ ಮನೋಭಾವ ಬೆಳೆಸುವಲ್ಲಿ ಯೋಗ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯಅತಿಥಿ ಸ್ಥಾನ ವಹಿಸಿ ಮಾತನಾಡಿದ ಪರಮಪೂಜ್ಯನಿಯ ಸುಮನ್ ಬೇಹಂಜಿ ಅವರು ಮಾತನಾಡಿ ಯೋಗದಿಂದ ಜ್ನಾನ, ದೈಹಿಕ ಪ್ರಗತಿ ಜೊತೆ ಮಾನವನ ಆರೊಗ್ಯ, ಸಂತೋಷ, ಆಯುಷ್ಯ ಹೇಚ್ಚಾಗುತ್ತದೆ ಎಂದು ಪ್ರತಿಪಾದಿಸಿದರು ಜೋತೆಯಲ್ಲಿ ಯೋಗದ ಪ್ರಾತಿಕ್ಷಿಕೆಯನ್ನು ಮಕ್ಕಳಿಗೆ ಮಾಡಿಸಿದರು.
ಅತಿಥಿಗಳಾಗಿ ಮಾತನಾಡಿದ ಸರಕಾರಿ ಪ್ರೌಢಶಾಲೆಯ ನಿವ್ರತ್ತ ಮುಖ್ಯ ಶಿಕ್ಷಕರಾದ ಶ್ರೀ ಬಸವರಾಜ ಬಿರಾದಾರ ಅವರು ಯೋಗದ ಬಗ್ಗೆ ಪ್ರಾಸ್ತಾವಿಕ ನುಡಿ ನುಡಿದರು. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ವೀದ್ಯಾವತಿ ತೀರ್ಥ, ಶ್ರೀ ಮಲ್ಲಿಕಾರ್ಜುನ ವಳಂಕಿ, ಶ್ರೀ ಮಸ್ತಾನ್ ಪಟೆಲ್, ಶಾಲಾ-ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಃಇಸಿದ್ದರು.
ಉಪನ್ಯಾಸಕರಾದ ಶ್ರೀ ನರೇಂದ್ರ ಪಾಟೀಲ ಸ್ವಾಗತಿಸಿದರು, ಶ್ರೀ ಸಂಗಮೆಶ ಪಾಟೀಲ್ ನಿರೂಪಿಸಿದರು, ಶ್ರೀ ಸಾಬಗೌಡ ನಾಯಕ ವಂದಿಸಿದರು.