9ರಂದು 89ನೇ ಕೆಯುಡಬ್ಲ್ಯುಜೆ ರಾಜ್ಯ ಮಟ್ಟದ ಸಾಮಾನ್ಯ ಮಹಾಸಭೆ

ಬೀದರ್: ಜ.5:ಈ ತಿಂಗಳ 9ರಂದು ರಾಜ್ಯದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡಿನ ಪುಷ್ಪಗಿರಿ ಮಹಾ ಸಂಸ್ಥಾನದ ಅವರಣದಲ್ಲಿರುವ ಪುಷ್ಪಗಿರಿ ಕಲಾಭವನದಲ್ಲಿ ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ 11.30 ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2021-22ನೇ ಸಾಲಿನ 89ನೇ ರಾಜ್ಯ ಮಟ್ಟದ ಸಾಮಾನ್ಯ ಮಹಾಸಭೆ ಹಮ್ಮಿಕೊಳ್ಳಲಾಗಿದೆ.

ಇತ್ತಿಚೀಗೆ ನಡೆದಾಡುವ ದೈವಿಶಕ್ತಿ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ನಿಗದಿಯಾಗಿದ್ದ ಈ ಸಾಮಾನ್ಯ ಮಹಾಸಭೆಯ ಸ್ಥಳ ಬದಾವಣೆ ಮಾಡಲಾಗಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀದರ್ ಜಿಲ್ಲೆಯಲ್ಲಿ 188 ಜನ ಸದಸ್ಯರಿದ್ದು ಅವರೆಲ್ಲರಿಗೆ ಭಾಗವಹಿಸಲು ಮುಕ್ತ ಅವಕಾಶ ಇರುತ್ತದೆ. ಸಾಮಾನ್ಯ ಮಹಾಸಭೆಗೆ ಆಗಮಿಸುವ ಜಿಲ್ಲೆಯ ಎಲ್ಲ ಕೆಯುಡಬ್ಲ್ಯುಜೆ ಸದಸ್ಯರಿಗೆ ವಸತಿ, ಉಪಹಾರ ಹಾಗೂ ಭೋಜನದ ವ್ಯವಸ್ಥೆ ಇರುತ್ತದೆ. ಪ್ರಯಾಣ ವೆಚ್ಚ ಸ್ವಂತ ಭರಿಸಿಕೊಂಡು ಬರತಕ್ಕದ್ದು.

ಕಾರಣ ಈ ಮಹಾಸಭೆಗೆ ಆಗಮಿಸುವ ಜಿಲ್ಲೆಯ ಎಲ್ಲ ಕೆಯುಡಬ್ಲ್ಯುಜೆ ಸದಸ್ಯರು ಜ.7ರೊಳಗೆ ಆಗಮಿಸುವ ಬಗ್ಗೆ ಜಿಲ್ಲಾ ಸಂಘಕ್ಕೆ ಸ್ಪಷ್ಟ ಮಾಹಿತಿ ನೀಡಬೇಕು. ಜ.7ರ ನಂತರ ತಿಳಿಸುವ ಅಥವಾ ನಮಗೆ ಮಾಹಿತಿ ನೀಡದೇ ನೇರವಾಗಿ ಆಗಮಿಸುವ ಸದಸ್ಯರಿಗೆ ವಸತಿ ವ್ಯವಸ್ಥೆ ಇರುವುದಿಲ್ಲ.

ಆದ ಕಾರಣ ಜಿಲ್ಲೆಯ ಎಲ್ಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಈ ಸಾಮಾನ್ಯ ಮಹಾಸಭೆಗೆ ಆಗಮಿಸಿ ರಾಜ್ಯ ಸಂಘಕ್ಕೆ ತಮ್ಮ ಸಲಹೆ ಸೂಚನೆ ನೀಡಬೇಕೆಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ-(9448604824) ಪ್ರಕಟಣೆ ಮೂಲಕ ತಿಳಿಸಿದ್ದಾರೆ.