9ರಂದು ಬೆಂಗಳೂರಿನಲ್ಲಿ ಕಲಬುರಗಿಯ ಲಾವಣ್ಯ ‘ಭರತ ನಾಟ್ಯ’ ರಂಗಪ್ರವೇಶ

ಕಲಬುರಗಿ,ಏ.7-ಕಲಾ ಯೋಗಿ, ವಿದ್ವಾನ್ ಪುಲಿಕೇಶಿ ಕಸ್ತೂರಿ ಅವರ ಬಳಿ ಭರತ ನಾಟ್ಯ ಕಲಿತ ಕಲಬುರಗಿಯ ಕುಮಾರಿ ಲಾವಣ್ಯ ಜಮಖಂಡಿ ಅವರ ‘ಭರತ ನಾಟ್ಯ ರಂಗ ಪ್ರವೇಶ’ ಬೆಂಗಳೂರಿನಲ್ಲಿ ಭಾನುವಾರ ನಡೆಯಲಿದೆ.
ಲಾವಣ್ಯ ಅವರು ಕಲಬುರಗಿಯ ಕರುಣೇಶ್ವರ ನಗರದ ಹಿರಿಯ ತೆರಿಗೆ ಸಲಹೆಗಾರ (ಸಿಎ) ವಿಷ್ಣುತೀರ್ಥ ಜಮಖಂಡಿ ಹಾಗೂ ಕವಿತಾ ದಂಪತಿಯ ಪುತ್ರಿ.
6ನೇ ವಯಸ್ಸಿನಲ್ಲಿ ಶಮಾ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದ ಲಾವಣ್ಯ ಅವರು, ಕಳೆದ 14 ವರ್ಷಗಳಿಂದ ವಿದ್ವಾನ್ ಪುಲಿಕೇಶಿ ಕಸ್ತೂರಿ ಅವರ ಶಾಂತಲಾ ಅಕಾಡೆಮಿಯಲ್ಲಿ ನಾಟ್ಯ ಕಲಿಯುತ್ತಿದ್ದಾರೆ.
ಭರತ ನಾಟ್ಯಂನಲ್ಲಿ ವಿದ್ವತ್ ಪರೀಕ್ಷೆ ಪೂರೈಸಿರುವ ಲಾವಣ್ಯ, ಗೀತಾ ವಂಟಿಕೊಪ್ಪ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತ ಪ್ರಾವಿಣ್ಯತೆ ಪಡೆದಿದ್ದಾರೆ.
ಈಗಾಗಲೇ ಚನ್ನೈನಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಬೆಂಗಳೂರಿನಲ್ಲಿ ನಡೆದ ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಭರತ ನಾಟ್ಯ ಪ್ರದರ್ಶನವನ್ನೂ ಮಾಡಿದ್ದಾರೆ. ಎಂಇಎಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಮುಗಿಸಿರುವ ಅವರು, ಕಂಪನಿ ಕಾರ್ಯದರ್ಶಿ (ಸಿಎ) ಪರೀಕ್ಷೆಯನ್ನು ಈಚೆಗೆ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆ 5 ಗಂಟೆಗೆ ಮಲ್ಲೆಶ್ವರದ ಚೌಡಯ್ಯ ಸ್ಮಾರಕ ಭವನದ ಹಿಂದೆ ಇರುವ ಕೃಷ್ಣದೇವರಾಯ ಕಲಾಮಂದಿರದಲ್ಲಿ ರಂಗ ಪ್ರವೇಶ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ನಾಡೋಜ ಡಾ.ಮಹೇಶ್ ಜೋಷಿ, ಕೈಶಿಕಿ ನಾಟ್ಯವಾಹಿನಿ ನಿರ್ದೇಶಕಿ ಮಾಲಾ ಶಶಿಕಾಂತ್, ಸಂಸ್ಕøತ ವಿದ್ವಾಂಸ ಡಾ. ಗುರುರಾಜಚಾರ್ಯ ನಿಪ್ಪಾಣಿ, ಶಾಂತಲಾ ಆಟ್ರ್ಸ್ ಅಧ್ಯಕ್ಷೆ ಪೆÇ್ರ.ಎಂ.ಆರ್. ಕಮಲಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.