9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ವಿಜಯಪುರ :ಜೂ.22: ಮಹಾವಿದ್ಯಾಲಯದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾಲೇಜಿನ ಮೈದಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೆಜಿನ ಬಿ.ಎ, ಬಿಕಾಂ, ಮತ್ತು ಬಿಎಸ್ಸಿ, ವಿಭಾಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ. ಆರ್.ಎಸ್. ಕಲ್ಲೂರಮಠ, ಕಾರ್ಯಕ್ರಮವನ್ನು ಉದ್ಘಾಟಿಸಿ, ಯೊಗವು ನಿತ್ಯ ಜೀವನದ ಪ್ರಮುಖ ಅಂಗವಾಗಬೇಕು. ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಒಂದು ಅಮೂಲ್ಯ ಕೊಡುಗೆಯಾಗಿದ್ದು ನಮ್ಮ ಪೂರ್ವಜರು ನಮಗೆ ನೀಡಿದ ಯೋಗದಿಂದ ಮನಸ್ಸು ಮತ್ತು ದೇಹದ ಐಕ್ಯತೆಯನ್ನು ಸಾಕಾರಗೊಳಿಸುತ್ತದೆ. ಯೋಗವು ಮನುಷ್ಯನ ಶಾರೀರಿಕವಾದ ಚೇತನಾತ್ಮಕವಾದ, ಬೌದ್ಧಿಕವಾದ ಭಾವನಾತ್ಮಕವಾದ ಮಾನಸಿಕವಾದ ಮತ್ತು ಅಧ್ಯಾತ್ಮಿಕವಾದ ಎಲ್ಲ ಸ್ಥರಗಳಲ್ಲಿ ಕೆಲಸ ಮಾಡುತ್ತದೆ. ಇದು ಇಂದಿನ ಅತ್ಯಗತ್ಯವಾದ ಅವಶ್ಯಕತೆಯೂ ಮತ್ತು ನಾಳಿನ ಅಗತ್ಯವೂ. ಆಗಿದೆ ಎಂದು ನುಡಿದರು.
ಡಾ. ರಾಜಶೇಖರ ಬೆನಕನಹಟ್ಟಿ ಯೋಗ ಶಿಕ್ಷಕರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟರು. ಸಹಾಯಕರಾಗಿ ಡಾ. ಶಾಹೀನಬಾನು ಕಿತ್ತೂರು ಇವರು ಕಾರ್ಯ ನಿರ್ವಹಿಸಿದರು. ಕಾಲೇಜಿನ ಎನ್.ಎಸ್.ಎಸ್. ಘಟಕ-1 ಮತ್ತು ಘಟಕ-2 ರ ಸಂಯೋಜಕರಾದ ಪ್ರೊ. ಎಂ.ಆರ್. ಜೋಶಿ ಮತ್ತು ಪ್ರೊ. ಚಿದಾನಂದ ಆನೂರ ಮತ್ತು ಸ್ಕೌಟ್ಸ್ ಮತ್ತು ರೈಡ್ಸ್‍ನ ಅಧಿಕಾರಿಗಳಾದ ಡಾ. ಭಾರತಿ ಹೊಸಟ್ಟಿ ಮತ್ತು ಕಾಲೇಜ ಬೋಧಕರು ಮತ್ತು ಬೋಧಕೇತರರು ಅತಿಥಿ ಉಪನ್ಯಾಸಕರು ಹಾಜರಿದ್ದರು. ಕಾರ್ಯಕ್ರಮವನ್ನು ಪ್ರೊ. ಚಿದಾನಂದ ಆನೂರರು ನಿರೂಪಿಸಿದರು. ಪ್ರೊ. ಎಂ.ಆರ್. ಜೋಶಿ ವಂದಿಸಿದರು.