9ಕೋಟಿ ರೂ. ಉಳಿತಾಯ ಬಜೆಟ್

ಮೈಸೂರು: ರಾಜ್ಯ ಚುನಾವಣೆ, ಮೇಯರ್ ಆಯ್ಕೆ ಮೊದಲಾದ ಕಾರಣಗಳಿಂದ ಮೂರು ತಿಂಗಳ ವಿಳಂಬದ ಬಳಿಕ ಮಹಾನಗರ ಪಾಲಿಕೆಯ 2023-24ನೇ ಬಜೆಟ್ ಮಂಡನೆಯಾಗಿದ್ದು, ಒಟ್ಟಾರೆ 9 ಕೋಟಿ ರೂ.ಗಳ ಉಳಿತಾಯದ ಕೊನೆಯ ಬಜೆಟ್ ಮಂಡನೆಯಾಗಿದೆ.
ಸಾವಿರ ಕೋಟಿ ರೂ. ಬಜೆಟ್‍ನಲ್ಲಿ ಮೈಸೂರು ನಗರದ ಸ್ವಚ್ಛತೆ, ಅಭಿವೃದ್ಧಿ, ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಸಂಬಂಧ ಆರು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ದೇಶದ ಸ್ವಚ್ಛತಾ ನಗರ ಪಟ್ಟಕ್ಕೇರಲು ಬಜೆಟ್‍ನಲ್ಲಿಯೇ ಅನುದಾನ ಮೀಸಲಿರುವ ಪ್ರಯತ್ನ ಮಾಡಿದೆ. ಬಜೆಟ್‍ನ ಬಹುಪಾಲು ಈ ಸ್ವಚ್ಛತಾ ಯೋಜನೆಗಳ ಜಾರಿಗೆ ವಿನಿಯೋಗವಾಗಲಿದೆ ಎಂಬುದೇ ವಿಶೇಷವಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ತ್ಯಾಜ್ಯ ಮುಕ್ತ ನಗರವೆಂದು ಕೇಂದ್ರ ಸರಕಾರದಿಂದ ಪುರಸ್ಕøತಗೊಂಡಿರುವ ಮೈಸೂರು ನಗರ ಪಾಲಿಕೆಯು ಕಸಾಯಿ ಖಾನೆಯ ಆಧುನೀಕರಣದೊಂದಿಗೆ ಒಣ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಯೊಂದಿಗೆ ದ್ವಿತಿಯ ಹಂತದಲ್ಲಿ ಕಸ ಸಂಗ್ರಹಣ ಕೇಂದ್ರ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.
ಇದರೊಂದಿಗೆ ಪ್ರಮುಖವಾಗಿ ಒಂದೇ ಸೂರಿನಡಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ ನಡೆದ ಪಾಲಿಕೆಯ ಬಜೆಟ್ ಮಂಡಿಸಿದ ತೆರಿಗೆ ನಿರ್ಧರಣಾ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಜೆಡಿಎಸ್ ಸದಸ್ಯರಾದ ಆರ್. ನಾಗರಾಜು ಈ ಪ್ರಮುಖ ಯೋಜನೆಗಳ ವಿಷಯವನ್ನು ಪ್ರಸ್ತಾಪಿಸಿದರು.
ಜತೆಗೆ ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಅಭಿವೃದ್ದಿ ಮತ್ತು ಉನ್ನತೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ಕೆಸರೆ ಘಟಕದಲ್ಲಿ 50 ಎಂಎಲ್‍ಡಿ ಮತ್ತು ವಿದ್ಯಾರಣ್ಯಪರಂ ಹಾಗೂ ರಾಯನಕೆರೆ ಘಟಕಗಳಲ್ಲಿ 100 ಎಂಎಲ್‍ಡಿ ಸಾಮಥ್ರ್ಯಕ್ಕೆ ಉನ್ನತೀಕರಣ ಮಾಡುವುದು .ಜತೆಗೆ ಆಧುನಿಕ ಮಾದರಿಯಲ್ಲಿ ಫುಡ್ ಸ್ಟ್ರೀಟ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಟಿ.ಎಸ್.ಶ್ರೀವತ್ಸ, ಕೆ.ಹರಿಶ್ ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ರೂಪಾ, ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ ಇದ್ದರು.
ಹೆಣ್ಣು ಮಕ್ಕಳಿಗೆ ಜ್ಞಾನ ಸಿರಿ: ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳಿಗೆ ಪೆÇ?ರೀತ್ಸಾಹ ನೀಡಲು ಜ್ಞಾನ ಸಿರಿ ಯೋಜನೆ ರೂಪಿಸಲಾಗಿದ್ದು, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ 10 ಮಂದಿ ವಿದ್ಯಾರ್ಥಿನಿಯರಿಗೆ 50 ಸಾವಿರ ರೂ.ವ್ಯಾಸಂಗ ಪೆÇ?ರೀತ್ಸಾಹ ಧನ ನೀಡಲಾಗುತ್ತದೆ.
ನಾನಾ ಕಲ್ಯಾಣ ಕಾರ್ಯಕ್ರಮ: ಆರ್ಥಿಕವಾಗಿ ಹಿಂದುಳಿದಿರುವ ವೃತ್ತಿಪರ ಜನಾಂಗದವರಿಗೆ ಒಂದು ಬಾರಿಗೆ 10 ಸಾವಿರ ರು. ಪೆÇ?ರೀತ್ಸಾಹ ಧನ, ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‍ಸಿ ಮತ್ತು ಎಸ್ಟಿ ವರ್ಗ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳಾ ಆಟೋ ರಿಕ್ಷಾ ಚಾಲಕರಿಗೆ ಇ-ಆಟೋ ನೀಡುವುದು.
9 ಕೋಟಿ ರೂ. ಉಳಿತಾಯ ಬಜೆಟ್: 2023-24 ನೇ ಸಾಲಿನಲ್ಲಿ ಪಾಲಿಕೆಯು ಒಟ್ಟು ನಾನಾ ಆದಾಯ ಮೂಲಗಳಿಂದ 1058.01 ಕೋಟಿ ರೂ. ಆದಾಯ ಸಂಗ್ರಹಣೆ ಗುರಿ ಹೊಂದಲಾಗಿದ್ದು, 1048.96 ಕೋಟಿ ರೂ. ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆದಾಯ- ವೆಚ್ಚ ಕಳೆದು 9.05 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ. ಕಳೆದ ಸಾಲಿನಲ್ಲಿ ಪಾಲಿಕೆಯಲ್ಲಿ 6.11 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆಯಾಗಿತ್ತು.