890ನೇ ಬಸವೇಶ್ವರ ಜಯಂತಿಯ ಆಚರಣೆ

ತಿ.ನರಸೀಪುರ: ಏ.23:- ಸಮಾನತೆಯ ಸಾಕಾರಮೂರ್ತಿ ಕಾಯಕಯೋಗಿ ಜಗಜ್ಯೋತಿ ಬಸವೇಶ್ವರ 890ನೇ ಜಯಂತಿಯನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಯಿತು.
ಪಟ್ಟಣದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿ.ಜೆ.ಗೀತಾ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು,ಜಾತೀಯತೆಯನ್ನು ಮೀರಿ ಸಮಾನತೆಯನ್ನು ಸಾರಿದ ಸಮಾಜ ಸುಧಾರಕರಲ್ಲಿ ಬಸವಣ್ಣನವರು ಅಗ್ರಗಣ್ಯರು.ಅವರ ‘ಅನುಭವ ಮಂಟಪ’ದ ಪರಿಕಲ್ಪನೆ ಜಗತ್ತಿಗೆ ಮಾದರಿ.ಹಾಗಾಗಿ ಅವರ ಸ್ಮರಣೆ ಈ ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದರು.
ವೀರಶೈವ ಮಹಾಸಭಾದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ,ಬಸವಣ್ಣನವರು ಜಾತಿ ನಿರ್ಮೂಲನೆಗೊಸ್ಕರ 12ನೇ ಶತಮಾನದಲ್ಲೇ ಅಂತರಜಾತಿ ವಿವಾಹಕ್ಕೆ ಉತ್ತೇಜನ ನೀಡಿದ್ದರು.ಅವರ ಆದರ್ಶಗಳು ಅನುಕರಣೀಯ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಕಿರಣ್, ಲೋಕೇಶ್, ತಾಲೂಕು ಕುರುಬ ಸಂಘದ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ಕೆಬ್ಬೆಹುಂಡಿ ಶಿವಕುಮಾರ್,ಶಂಭುದೇವನಪುರ ರಮೇಶ್,ಕೈಯಂಬಳ್ಳಿ ಅಶೋಕ್ ,ದೊಡ್ಡಪುರ ಮರಿಸ್ವಾಮಿ ,ಮಂಜುನಾಥ್ ,ವಿಜಯಕುಮಾರ್ ,ಯೋಗೇಶ್ ,ಶಿರಸ್ತೆದಾರ್ ಮಂಜುಳ ,ಪ್ರ.ದ.ಸಹಾಯಕ ರಾಜೇಶ್,ಮಹದೇವ ಪ್ರಸಾದ್,ಶಿವಕುಮಾರ್ ,ಹರ್ಷಕುಮಾರ್,ಪ್ರಮೋದ್ ,ಚೈತ್ರ ,ಹಂಸ ,ವಿದ್ಯಾ ಇತರರು ಹಾಜರಿದ್ದರು.