ರಾಯಚೂರು.ನ.16- ಸತತ ಮೂರು ದಿನಗಳಿಂದ ನಗರದ ರಸ್ತೆಗಳ ಸ್ವಚ್ಛತಾ ಕಾರ್ಯ ನಿರಂತರವಾಗಿ ಮುಂದುವರೆದಿದೆ.
ನಗರಸಭೆ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಆದ್ಯತೆ ಮೇರೆಗೆ ಈ. ವಿನಯ ಅವರು ನಗರ ಸ್ವಚ್ಛತೆಗೆ ಆದ್ಯತೆ ನೀಡಿ, ತಮ್ಮ ಕಾರ್ಯಾಚರಣೆ ಕೈಗೊಂಡಿದ್ದರು.
ಕಳೆದ ಮೂರು ದಿನಗಳಿಂದ ನಗರದ ರಸ್ತೆಗಳಲ್ಲಿ ಮಣ್ಣಿನ ಪ್ರಮಾಣ ಕಡಿಮೆಯಾಗಿ ಧೂಳಿನ ಕಿರುಕುಳ ತಗ್ಗಿದೆ. ಜನ ಇದರಿಂದ ಒಂದಷ್ಟು ಸಮಾಧಾನಗೊಂಡಿದ್ದಾರೆ. ಈ.ವಿನಯಕುಮಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಜಾರಿಗೊಳಿಸಿ, ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಮಾರ್ಗಸೂಚಿ ನೀಡಿದ್ದಾರೆ. ಪ್ರತಿ ನಿತ್ಯ 10 ಪ್ಯಾಕೇಜ್ ಮೂಲಕ ಯಾವ ರಸ್ತೆಯಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕೆನ್ನುವ ವೇಳಾಪಟ್ಟಿ ಅವರಿಗೆ ಒದಗಿಸಲಾಗಿದೆ. ಇಂದು ಪ್ಯಾಕೇಜ್-1 ರಡಿ ಐಡಿಎಸ್ಎಂಡಿ ಲೇಔಟ್, ಅಂಬೇಡ್ಕರ್ ವೃತ್ತ, ಪ್ಯಾಕೇಜ್-2 ರಲ್ಲಿ ನಿಜಲಿಂಗಪ್ಪ ಕಾಲೋನಿ, ಜಿಲ್ಲಾ ಪಂಚಾಯತ, ನ್ಯಾಯಾಧೀಶರ ವಸತಿ ನಿಲಯಗಳು, ಪ್ಯಾಕೇಜ್-3 ಬಿಆರ್‌ಬಿ ವೃತ್ತ, ಅಶೋಕ ಡಿಪೋ, ಪ್ಯಾಕೇಜ್-4 ವಾಸವಿನಗರ, ಬಸ್ಟ್ಯಾಂಡ್, ಹನುಮಾನ ಟಾಕೀಸ್, ನೇತಾಜಿ ವೃತ್ತ, ಪ್ಯಾಕೇಜ್-5 ಆರ್‌ಟಿಓ ಮತ್ತು ಬಿಆರ್‌ಬಿ, ಪ್ಯಾಕೇಜ್-6 ಬಸವನಬಾವಿ ವೃತ್ತ, ಗದ್ವಾಲ್ ರಸ್ತೆ, ಪ್ಯಾಕೇಜ್-7 ಗಂಜ್ ವೃತ್ತ, ಚಂದ್ರಬಂಡಾ ರಸ್ತೆ, ಪ್ಯಾಕೇಜ್-8 ಮನ್ಸಲಾಪೂರು ರಸ್ತೆ, ಟಿಪ್ಪು ಸುಲ್ತಾನ್ ವೃತ್ತ, ಪ್ಯಾಕೇಜ್-9 ನೇತಾಜಿ ವೃತ್ತದಿಂದ ಸಿಟಿ ಟಾಕೀಸ್ ವೃತ್ತ, ಪ್ಯಾಕೇಜ್ -10 ಅಂಬಾಭವಾನಿ ದೇವಸ್ಥಾನ ಮತ್ತು ಗಂಗಾನಿವಾಸ ಬಳಿ ಸ್ವಚ್ಛತೆಗೆ ಸೂಚಿಸಲಾಗಿದ್ದು, ಇದನ್ನು ಖುದ್ಧಾಗಿ ಅಧ್ಯಕ್ಷರು ಮತ್ತು ಸದಸ್ಯರು ಪರಿಶೀಲಿಸುತ್ತಾರೆ.