ಕಲಬುರಗಿ:ನಯಾ ಸವೇರಾ ಸಂಘಟನೆ ವತಿಯಿಂದ ವಾರ್ಡ್ ನಂಬರ್ 20ರ ಮಿಸ್ಬಾ ನಗರದಲ್ಲಿ ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪ್ಯಾನ್ ಕಾರ್ಡ್, ಆಧಾರ್ ಕರೆಕ್ಷನ್ ಮಾಡಲಾಗುತ್ತಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಪ್ರತಿಷ್ಠಿತ ಖಾಜಿ ಮನೆತನದ ಎಂಟನೇ ತಲೆಮಾರಿನ ಡಾಕ್ಟರ್ ಖಾಜಿ ಹಮೀದ್ ಫೈಸಲ್ ಸಿದ್ದಿಕಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಡಾಕ್ಟರ್ ಮಹಿಬೂಬ್ ಆಗಮಿಸಿದ್ದರು.