88,078 ಕೋಟಿ ರೂ.ಗಳಿಗೆ 5 ಸ್ಪೆಕ್ಟ್ರಂ ಖರೀದಿಸಿದ ಉದ್ಯಮಿ ಅಂಬಾನಿ

ನವದೆಹಲಿ, ಆ. 1- ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ಜಿಯೋ 88,078 ಕೋಟಿ ರೂ.ಗಳಿಗೆ 5ಜಿ ಸ್ಪೆಕ್ಟ್ರಂ ಖರೀದಿಸಿದೆ. ಇದರೊಂದಿಗೆ ಅಗ್ರ ಬಿಡ್ ದಾರರಾಗಿ ಹೊರಹೊಮ್ಮಿದ್ದಾರೆ.ಅಂಬಾನಿ ದೇಶದ ಮೊಟ್ಟಮೊದಲ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಅಂತ್ಯಗೊಂಡಿದ್ದು, ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹1.50 ಲಕ್ಷ ಕೋಟಿ ಆದಾಯ ಹರಿದು ಬರಲಿದೆ.
ಹೈ ಸ್ಪೀಡ್ ಇಂಟರ್ನೆಟ್‌ಗಾಗಿ ನೀಡಲಾದ ಐದು ಸ್ಪೆಕ್ಟ್ರಮ್‌ನ ಹರಾಜು ಮೊತ್ತ ಕಳೆದ ವರ್ಷ ಮಾರಾಟವಾದ 4ಜಿ ಸ್ಪೆಕ್ಟ್ರಮ್‌ ಹರಾಜಿನ ಮೊತ್ತಕ್ಕಿಂತ ದುಪ್ಪಟ್ಟಾಗೆ ಖರೀದಿಸಿದೆ ಜಿಯೊ.
ಇದರೊಂದಿಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಹರಾಜು ಪ್ರಕ್ರಿಯೆಗೆ ತೆರೆಬಿದ್ದಿದೆ.
ಟೆಲಿಕಾಂಗೆ ಹೊಸದಾಗಿ ಪ್ರವೇಶಿಸಿರುವ ಅದಾನಿ ಸಮೂಹವೂ ಸಹ 26Mhz ಸ್ಪೆಕ್ಟ್ರಮ್​​ ಖರೀದಿಸಿತು. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಸೇರಿದಂತೆ 4 ಕಂಪನಿಗಳು ತರಂಗಾಂತರ ಖರೀದಿಗಾಗಿ ಭಾರೀ ಪೈಪೋಟಿ ಕಂಡುಬಂದಿತ್ತು. ಅಂತಿಮವಾಗಿ 5 ಸ್ಪೆಕ್ಟ್ರಂ ಅಂಬಾನಿ ಪಾಲಾಯಿತು.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ , ಒಟ್ಟು 1,50,173 ಕೋಟಿ ರೂ.ಗಳ ಬಿಡ್ ಮೊತ್ತದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, 72,098 MHz ತರಂಗಾಂತರವನ್ನು ಹರಾಜಿಗಿಡಲಾಗಿತ್ತು. ಇದರಲ್ಲಿ 51,236 MHz ಮಾರಾಟವಾಗಿದೆ ಎಂದು ತಿಳಿಸಿದರು.
ಕಳೆದೊಂದು ವಾರದಿಂದ ನಡೆದ ಹರಾಜು ಪ್ರಕ್ರಿಯೆಯಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ಟೆಲಿಕಾಂ ತರಂಗಾಂತರ ಮಾರಾಟವಾಗಿದೆ.
ಬಿಡ್ ಮಾಡಿದ ಒಟ್ಟು ಸ್ಪೆಕ್ಟ್ರಮ್‌ನ ಸುಮಾರು ಶೇ. 71ರಷ್ಟು ಮಾರಾಟವಾಗಿದೆ. ರಿಲಯನ್ಸ್ ಜಿಯೋ 24,740 MHz, ವೊಡಾಫೋನ್ ಐಡಿಯಾ 1800 MHz, ಭಾರ್ತಿ ಏರ್‌ಟೆಲ್ 19,867 MHz ತರಂಗಾಂತರ ಖರೀದಿಸಿವೆ.