ನೆಹರು ಯುವಕ ಕೇಂದ್ರ ಮೈಸೂರು, ಶ್ರೀ ತಲಕಾವೇರಿ ಮಹಿಳಾ ವಿದ್ಯಾಸಂಸ್ಥೆ ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಸರಸ್ವತಿಪುರಂನಲ್ಲಿರುವ ಯೂತ್ ಹಾಸ್ಟೆಲ್ ಸಭಾಂಗನದಲ್ಲಿ ಇಂದು ನೆಹರು ಯುವ ಕೇಂದ್ರದ ಸ್ಥಾಪನಾ ದಿನ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್, ಲೋಕಾಯುಕ್ತದ ಜಿಲ್ಲಾ ಅಧೀಕ್ಷಕಿ ಪಿ.ವಿ. ಸ್ನೇಹಾ, ಕಡಕೊಳದ ಹೆಚ್.ಆರ್.ಟಿ.ಪಿ.ಎಸ್. ಸಂಸ್ಥೆಯ ವ್ಯವಸ್ಥಾಪಕ ಕೆ.ಆರ್.ರಾಜೇಂದ್ರ ಪ್ರಸಾದ್, ಶ್ರೀ ತಲಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ನಳಿನಿ ತಮ್ಮಯ್ಯ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಪಾಲ್ಗೊಂಡಿದ್ದರು.