87,416 ಕೋಟಿ ರೂಪಾಯಿಲಾಭಾಂಶ ಘೋಷಣೆ: ಆರ್ ಬಿಐ

ಮುಂಬೈ,ಮೇ.20- ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆರ್‌ಬಿಐ ಕೇಂದ್ರ ಸರ್ಕಾರಕ್ಕೆ 87,416 ಕೋಟಿ ರೂಪಾಯಿ ಲಾಭಾಂಶ ಘೋಷಿಸಿದೆ,ಹಿಂದಿನ ಹಣಕಾಸು ವರ್ಷದಲ್ಲಿ ಪಾವತಿಸಿದ 30,307 ಕೋಟಿ ರೂಪಾಯಿಗಳ ಮೊತ್ತ ಪಾವತಿಸಿದ್ದು ಈ ಬಾರಿ ಮೂರು ಪಟ್ಟು ಹೆಚ್ಚು ಪಾವತಿಸಿದೆ ಎಂದು ತಿಳಿಸಲಾಗಿದೆ.ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ಏರಿಳಿತದ ಪರಿಣಾಮವಾಗಿ ಆಶ್ಚರ್ಯಕರವಾಗಿ ಹೆಚ್ಚಿನ ಲಾಭಾಂಶ ಆರ್‌ಬಿಐಗೆ ಡಾಲರ್‌ಗಳ ಮಾರಾಟದ ಮೂಲಕ ಭಾರಿ ಲಾಭ ಕಾಯ್ದಿರಿಸಲು ಅನುವು ಮಾಡಿಕೊಟ್ಟಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.ಮಾರಾಟ ಮಾಡುವುದರಿಂದ ಆರ್‌ಬಿಐನ ಲಾಭಾಂಶ-ಪಾವತಿ ಸಾಮರ್ಥ್ಯದ ಮೇಲೆ ದುಪ್ಪಟ್ಟು ಪರಿಣಾಮ ಬೀರುತ್ತದೆ ಆದರೆ ಖರೀದಿ ಬೆಲೆಗಿಂತ ಹೆಚ್ಚಿನ ವಿನಿಮಯ ದರದಲ್ಲಿ ಡಾಲರ್‌ಗಳ ಮಾರಾಟ ಲಾಭ ಉಂಟುಮಾಡುತ್ತದೆ, ಆಯವ್ಯಯದ ಗಾತ್ರದಲ್ಲಿನ ಕುಸಿತ ನಿಬಂಧನೆಗಳ ಅಗತ್ಯಕಡಿಮೆ ಮಾಡಿದೆ ಎನ್ನಲಾಗಿದೆ.ಸರ್ಕಾರದ ಒಟ್ಟಾರೆ ಡಿವಿಡೆಂಡ್ ಆದಾಯವನ್ನು ಪರಿಗಣಿಸಿದರೆ ಇನ್ನೂ ಹೆಚ್ಚಾಗಿರುತ್ತದೆ. ಎಸ್‌ಬಿಐ ತನ್ನ ಡಿವಿಡೆಂಡ್ ಪಾವತಿ ಕಳೆದ ವರ್ಷ 7.1 ರಿಂದ ಪ್ರತಿ ಷೇರಿಗೆ 11.3 ರೂ.ಗೆ ಹೆಚ್ಚಿಸಿದೆ. ಹೆಚ್ಚಿನ ಲಾಭಾಂಶ ಆದಾಯ ಜಿಡಿಪಿಯ ಯ ಶೇ. 5.9 ರಷ್ಟು ಹಣಕಾಸಿನ ಕೊರತೆಯ ಗುರಿ ಪೂರೈಸಲು ಸರ್ಕಾರ ಶಕ್ತಗೊಳಿಸಿದೆ.ಸಾರ್ವಜನಿಕ ವಲಯದ ಬ್ಯಾಂಕುಗಳು ಸಹ ಉತ್ತಮ ಲಾಭದ ವರದಿ ಮಾಡಿರುವುದರಿಂದ ಮತ್ತು ಲಾಭಾಂಶ ಘೋಷಿಸಿರುವುದರಿಂದ, ಈ ಮೂಲದಿಂದ ಹೆಚ್ಚಿನ ಒಳಹರಿವು ಇದೆ.ಆರ್‌ಬಿಐನ ಕೇಂದ್ರೀಯ ಮಂಡಳಿ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ತನ್ನ 602 ನೇ ಸಭೆಯಲ್ಲಿ ಈ ಆದಾಯ ಘೋಷಿಸಿದೆ.