ಮಠದ ಕುರುಬರಟ್ಟಿ ಕೆರೆಯಲ್ಲಿ ಕೊಳಚೆ ನೀರಿನಿಂದ ಮೀನುಗಳ ಸಾವು; ಡಾ ಎಚ್ ಕೆ ಎಸ್ ಸ್ವಾಮಿ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಜೂ.೮; ದುರ್ಗದ ಬಳಿ ಕಾಣುವ ಒಂದೆರಡು ಕೆರೆಗಳನ್ನ ನಾವು ಸರಿಯಾಗಿ ನಿರ್ವಹಣೆ ಮಾಡದೇ, ಕೊಳಚೆ ನೀರಿನಿಂದ ವಾಸನೆ ಬರುವಂತಹ ಪರಿಸ್ಥಿತಿ ನಿರ್ಮಾಣ ಮಾಡಿ, ಮಲ್ಲಾಪುರದ ಕೆರೆ, ಮಠದ ಕುರುಬರಟ್ಟಿ ಕೆರೆ ಎರಡು ಸಹ ಮಾಲಿನ್ಯದಿಂದ ಬಳಲುತ್ತಿದ್ದು, ಅಲ್ಲಿರುವ ಮೀನುಗಳೆಲ್ಲಾ ಸಾಯುತ್ತಿದ್ದು, ಕೆಟ್ಟ ವಾಸನೆ ಬಂದರೂ ಸಹ ಇದರ ನಿರ್ವಹಣೆ ಬಗ್ಗೆ ಯಾವ ಅಧಿಕಾರಿಗಳು ಚಿಂತಿಸುತ್ತಿಲ್ಲ, ಇವುಗಳ ರಕ್ಷಣೆಗೆ ಸರ್ಕಾರ ಮತ್ತು ಸಾರ್ವಜನಿಕರು ಸಹ ಕೈಜೋಡಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿದ್ದಾರೆ.ಸುತ್ತಮುತ್ತಲು ವಾಸವಾಗಿರುವ ಮನೆಗಳಿಂದ, ಗ್ರಾಮಗಳಿಂದ ಚರಂಡಿ ಮತ್ತು ಕೊಳಚೆ ನೀರನ್ನ ಸೀದಾ ಕೆರೆಗಳಿಗೆ ಹರಿದುಬಿಡುತ್ತಿರುವುದರಿಂದ, ಕೆರೆಯ ನೀರು ಮಾಲಿನ್ಯಗೊಂಡು, ಅದರಲ್ಲಿರುವ ಮೀನುಗಳೆಲ್ಲಾ ಸಾವನ್ನಪುö್ಪತ್ತಿದ್ದಾವೆ. ಕೆರೆಯ ನೀರಿನ ಅಂಚಿನಲ್ಲಿ ಕಪುö್ಪ ಬಣ್ಣದ ವಾಸನೆಯುಕ್ತ ನೀರು ಶೇಖರಣೆಯಾಗುತ್ತಿದೆ, ಕೆರೆ ಸುತ್ತಮುತ್ತಲಿರುವ ಹೋಟೆಲ್‌ಗಳು ಸಹ ತಮ್ಮ ತ್ಯಾಜ್ಯವನ್ನ, ಕೊಳಚೆ ನೀರನ್ನು ಕೆರೆಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ ಜನರು ಮಾತನಾಡುತ್ತಿದ್ದಾರೆ, ಇವುಗಳನ್ನು ನಗರಸಭೆಯವರು ವೀಕ್ಷಿಸಿ, ಕೆರೆಯನ್ನು ಸಂರಕ್ಷಿಸುವುದರ ಬಗ್ಗೆ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ತಿಳಿಸಿದ್ದಾರೆ.ಸುತ್ತಮುತ್ತಲಿನ ವಾಸದಲ್ಲಿರುವ ಜನರು ಸಹ, ಮನೆಯ ಪ್ಲಾಸ್ಟಿಕ್ ಘನತ್ಯಾಜ್ಯವನ್ನ ಸಿಕ್ಕಸಿಕ್ಕ ಕಡೆ, ಕಟ್ಟಡದ ತ್ಯಾಜ್ಯವನ್ನ, ಚಪ್ಪಲಿ, ಟೈರು, ಬಟ್ಟೆ ಚೀಲಗಳನ್ನ ಕೆರೆಗೆ ಸುರಿಯುತ್ತಿರುವುದರಿಂದ, ಕೆರೆಯ ಹಂಚನ್ನು ಮಾಲಿನ್ಯಗೊಳಿಸಿಕೊಂಡಿದೆ. ತೇಲುತ್ತಿರುವ ಪ್ಲಾಸ್ಟಿಕ್, ನೀರಿನ ಬಣ್ಣವನ್ನು ಬದಲಾಯಿಸಿವೆ, ಇದು ಜನರಿಗೆ ಈಗಲೂ ಸಹ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಸಾಲದು ಎಂಬುದನ್ನ ತಿಳಿಸಿಕೊಡುತ್ತದೆ ಎಂದರುಕಾನೂನಿನ ಕೈಗೆ ಸಿಗದಂತೆ ಒಳಗಿಂದೊಳಗೆ ನಾವು ಕೆರೆಗಳನ್ನ ಮಾಲಿನಿಗೊಳಿಸುತ್ತಿದ್ದು, ಸಂರಕ್ಷಣೆ ಬಗ್ಗೆ ನಾವು ಅರಿವುಂಟು ಮಾಡಿಕೊಳ್ಳುವವರೆಗೂ ನಮ್ಮ ಸುತ್ತಮುತ್ತಲಿನ ಕೆರೆಗಳನ್ನು ನಾವು ಇದೇ ರೀತಿ ಮಾಲಿನಿಗೊಳಿಸಿಕೊಳ್ಳುತ್ತಾ ಹೋಗುತ್ತೇವೆ. ನಗರದ ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಏರ್ಪಡಿಸಿ, ಆ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಮರುಬಳಕೆ ಮಾಡುವಂತಹ, ಯಂತ್ರೋಪಕರಣಗಳನ್ನು ಅನುಷ್ಠಾನಗೊಳಿಸಿ, ಕೆರೆಗಳನ್ನು ಸಂರಕ್ಷಿಸಬೇಕಾಗಿದೆ . ಅಧಿಕಾರಿಗಳು ಅಷ್ಟೊಂದು ಮುಂದಾಲೋಚನೆಯಿAದ ಕೆಲಸ ಮಾಡಿದರೆ ಮಾತ್ರ, ಸದ್ಯ ಚಿತ್ರದುರ್ಗದ ಒಂದೆರಡು ಕೆರೆಗಳನ್ನು, ನಾವು ವಾಸನೆ ಮುಕ್ತವನ್ನಾಗಿ ಮಾಡಬಹುದು ಎಂದರು..