872 ಕೊರೊನಾ ಪಾಸಿಟಿವ್ :07 ಜನರ ಸಾವು

ಕಲಬುರಗಿ.ಏ.26: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ‌ 7 ಜನ ನಿಧನರಾಗಿದ್ದಾರೆ ಎಂದು ಸೋಮವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಶಹಾಬಾದ ತಾಲೂಕಿನ‌ ಮರತೂರ ಗ್ರಾಮದ 47 ವರ್ಷದ ಪುರುಷ (ರೋಗಿ ಸಂ.1290295) ಏ.21 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.22ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ನೆಹರು ಗಂಜ್ ಪ್ರದೇಶದ 60 ವರ್ಷದ ವೃದ್ಧ (ರೋಗಿ ಸಂ.1285554) ಏ.19 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.24ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಿಂದ ಕಲಬುರಗಿಯ ಭವಾನಿ ನಗರದ 45 ವರ್ಷದ ಪುರುಷ (ರೋಗಿ ಸಂ.1349687) ಏ.24 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.25ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಿಂದ ಕಲಬುರಗಿಯ ರಾಮಜಿ ನಗರದ 60 ವರ್ಷದ ವೃದ್ಧೆ (ರೋಗಿ ಸಂ.1232768) ಏ.19 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.25ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ‌ ಅಧಿಕರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಪೂಜಾ ಕಾಲೋನಿಯ 62 ವರ್ಷದ ವೃದ್ಧ (ರೋಗಿ ಸಂ.1253528) ಏ.23 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.26ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಸ್ವಸ್ತಿಕ್ ನಗರದ 68 ವರ್ಷದ ವೃದ್ಧ (ರೋಗಿ ಸಂ.1329987) ಏ.24 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.25ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಚಿಂಚೋಳಿ ಪಟ್ಟಣದ 78 ವರ್ಷದ ವೃದ್ಧ (ರೋಗಿ ಸಂ.1178603) ಏ.17 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.26ಕ್ಕೆ ನಿಧನ ಹೊಂದಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ 439 ಜನ ನಿಧನರಾಗಿದ್ದಾರೆ
ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 872 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 35326 ಪಾಸಿಟಿವ್ ಕೇಸ್ ಗ ಲಾದಂತಾಗಿದೆ. 799 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 27734 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.7153 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

.