ಬಸವ ಸಮಿತಿ 2024 ನೇ ಸಾಲಿನ ವಿಶ್ವ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಸಕ್ತ ಕೆಎಲ್‍ಇ ಸಂಸ್ಥೆಯ ಹುಬ್ಬಳ್ಳಿ ಜಗದ್ಗುರು ಗಂಗಾಧರ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಮಲ್ಲಮ್ಮ ಯಾಟಗಲ್ ಅವರನ್ನು ಪ್ರಾಚಾರ್ಯರಾದ ಎಸ್.ಎಲ್. ಪಾಟೀಲ ಅವರು ಅಭಿನಂದನಾ ಪತ್ರ ಮತ್ತು ವಚನ ಗ್ರಂಥ ನೀಡಿ ಗೌರವಿಸಿದರು. ಪ.ಪೂ. ಪ್ರಾಚಾರ್ಯ ಡಾ. ಡಿ.ಕೆ. ವಾಘಮೋಡೆ, ಹುಬ್ಬಳ್ಳಿಯ ಸರಾಫ ಅಸೋಸಿಯೇಶನ್ ಸಹಕಾರ್ಯದರ್ಶಿ ವೀರಣ್ಣ ಹೂಲಿ, ಕಸಾಪ ಬೆಳಗಾವಿ ಮಾಜಿ ಅಧ್ಯಕ್ಷ ಮೋಹನ ಬಸವನಗೌಡ ಪಾಟೀಲ ಇತರರಿದ್ದರು.