ಮೈಸೂರು ನಗರದ ಸುಬ್ಬರಾಯನಕೆರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಭಾರತೀಯ ದಲಿತ ಸಾಹಿತ್ಯ ಅಕಾಡಮಿ, ನವದೆಹಲಿ, ಕರ್ನಾಟಕ ಘಟಕಗಳ ಸಂಯುಕ್ತಾಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ.ಪುಟ್ಟಸಿದ್ದಯ್ಯ, ಡಾ.ಎಸ್.ಚಂದ್ರಶೇಖರ್, ಎನ್.ಎಸ್. ಜನಾರ್ಧನಮೂರ್ತಿ, ಸಿ.ಮಹೇಶ್ವರನ್ ಇವರುಗಳನ್ನು ಸನ್ಮಾನಿಸಲಾಯಿತು.