ಅಂಜಲಿ ಅಂಬಿಗೇರ ಹಾಗೂ ನೇಹಾ ಹಿರೇಮಠ ಹತ್ಯೆ ಖಂಡಿಸಿ ಜಾತ್ಯಾತೀತ ಹಾಗೂ ಪಕ್ಷಾತೀತ ಬೃಹತ್ ಪ್ರತಿಭಟನಾ ಮೆರವಣಿಗೆಯು ಹಾವೇರಿಯ ಶ್ರೀ ಜಗದ್ಗುರು ಶಾಂತಬೀಷ್ಮ ಚೌಡಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಗರದ ವೀರಾಪೂರ ಓಣಿಯಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಜರುಗಿತು. ಪಾಲಿಕೆ ಸದಸ್ಯರಾದ ನಿರಂಜನಯ್ಯ ಹಿರೇಮಠ, ಕರ್ನಾಟಕ ರಾಜ್ಯ ಕೂಲಿ, ಅಂಬಿಗೇರ, ಸುಣಗಾರ, ಗಂಗಾಮತಸ್ಥರ, ಎಲ್ಲಾ ಸಂಘಟನೆಗಳು, ವಿವಿಧ ಸಮುದಾಯದ ಸಂಘಸಂಸ್ಥೆಗಳು ಹಾಗೂ ಮಠಾಧೀಶರು ಮೊದಲಾದವರು ಉಪಸ್ಥಿತರಿದ್ದರು.