ಬಾದಾಮಿ ಇಲ್ಲಿನ ಹಿರಿಯ ದಿವಾಣಿ ನ್ಯಾಯಾದೀಶ ವ್ಹಿ.ಹನುಮಂತಪ್ಪ ಇವರಿಗೆ ಬೇರೆ ಕಡೆಗೆ ವರ್ಗಾವಣೆಯಾದ ಪ್ರಯುಕ್ತ ನಗರದ ವಕೀಲರ ಸಂಘದ ಕಚೇರಿಯಲ್ಲಿ ತಾಲೂಕಾ ವಕೀಲರ ಸಂಘದ ವತಿಯಿಂದ ಬೀಳ್ಕೊಡುವ ಸಮಾರಂಭದಲ್ಲಿ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಬಿ.ಸಿ.ಕಲ್ಯಾಣಶೆಟ್ಟಿ, ಹನಮಂತ ನೋಟಗಾರ, ಜಿ.ಎಲ್.ಒಂಟಿ, ಜ್ಯೋತಿ ಮುತಾಲಿಕದೇಸಾಯಿ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.