ಮಿಸ್ಸೆಸ್ ಕರ್ನಾಟಕ ಮಾಡೆಲ್  ಪ್ರಶಸ್ತಿ ಪಡೆದ  ಶ್ವೇತಾ ಪಾಟೀಲ್ 

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.೧೦: ವಿಂಗ್ಸ್ ಫ್ಯಾಷನ್ ಇವೆಂಟ್ಸ್ ವತಿಯಿಂದ ಕಳೆದ ಮೇ. ೪ ರಂದು ತುಮಕೂರಿನ ಎಸ್ ಮಾಲ್ ನಲ್ಲಿ ಆಯೋಜಿಸಿದ್ದ ಮಿಸ್ಸೆಸ್ ಕರ್ನಾಟಕ ಮಾಡೆಲ್  ಪ್ರಶಸ್ತಿಯನ್ನು ನಗರದ ಶ್ವೇತಾ ಪಾಟೀಲ್ ಮುಡಿಗೆರಿಸಿಕೊಂಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ‌ ಈ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಎನ್.ರಂಗನಾಥ್ ಸ್ವಾಮಿ ಮಾತನಾಡಿ, ನಗರದ ಸ್ವಾಮಿ ವಿವೇಕಾನಂದ ನಿವಾದಿಯಾದ ಶ್ವೇತಾರವರು ಮಿಸ್ಸೆಸ್ ಕರ್ನಾಟಕ, ಮಿಸ್ಸೆಸ್ ದಾವಣಗೆರೆ ಮತ್ತು ಪೀಪಲ್ ಚಾಯ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಶ್ವೇತಾ ಅವರು ನಗರದ ಸಂಜೀವಿನಿ ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ ಕಾಲೇಜಿನ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿರುವುದಲ್ಲದೆ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಡಾ. ಪ್ರಭಾರವರಿಂದ ಪ್ರೇರೇಪಿತರಾಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ಮುಂಚೂಣಿಯಲ್ಲಿದಾರೆ ಎಂದರು.ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರವರು   ಶ್ವೇತಾರವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ  ಸನ್ಮಾನಿಸಿ ಗೌರವಿಸಿದ್ದಾರೆ ಎಂದು ಹೇಳಿದರು.ವಿಜೇತೆ ಶ್ವೇತಾ ಪಾಟೀಲ್ ಮಾತನಾಡಿ, ನನ್ನ ತಾಯಿ ಲೀಲಾವತಿ ಆರ್ ಎಚ್ ಹಾಗೂ ಪತಿಯಾದ ಸಂತೋಷ ಪಾಟೀಲ್ ಮತ್ತು ಸ್ನೇಹಿತರಾದ ಗಾಯಿತ್ರಿ, ವೀಣಾ, ದೇವಿಕಾರವರ ಪ್ರೋತ್ಸಾಹದಿಂದ ಭಾಗವಹಿಸಿ ವಿಜೇತರಾಗಲು ಕಾರಣವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ವಿಜೇತೆ ತಾಯಿ ಲೀಲಾವತಿ, ಅನಿಲ್ ಗೌಡ್ರು, ಶೀಲಾ ಇದ್ದರು.