ಕಾಯಿಪೇಟೆಯಲ್ಲಿ 10ರಂದು ಬಸವ ಜಯಂತ್ಯೋತ್ಸವ

ಸಂಜೆವಾಣಿ ವಾರ್ತೆ

ದಾವಣಗೆರೆ, ಮೇ 8; ನಗರದ ಕಾಯಿಪೇಟೆ ಶ್ರೀ ಬಸವೇಶ್ವರ ನಗರದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ  ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ.ಅಂದು ಬೆಳಿಗ್ಗೆ 7 ರಿಂದ 9ರ ವರೆಗೆ ತೊಟ್ಟಿಲು ಪೂಜೆ, ಸಂಜೆ 5 ಗಂಟೆಗೆ  ವಿದ್ಯುತ್ ಅಲಂಕೃತ ವಾದ ಭವ್ಯವಾದ ಹೂವಿನ ಮಂಟಪದಲ್ಲಿ ಶ್ರೀ ಬಸವೇಶ್ವರ ಮೂರ್ತಿಯ ಮೆರವಣಿಗೆ ರಾಜಬೀದಿಗಳಲ್ಲಿ ಜರುಗಲಿದೆ. ಮೇ.9ರ ಗುರುವಾರ ಪ್ರಾತಃಕಾಲ ಶ್ರೀ ಬಸವೇಶ್ವರ ಪಾದಕ್ಕೆ ಮಹಾರುದ್ರಾಭಿಷೇಕ ಏರ್ಪಡಿಸಲಾಗಿದೆ.  ಮೇ.11ರ ಶನಿವಾರ ಸರ್ವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.