ಅಫಜಲಪುರ: ಮೈಸೂರ ಹುಲಿ ಹಜರತ್ ಟಿಪ್ಪು ಸುಲ್ತಾನ ಅವರ ಜಯಂತ್ಯೋತ್ಸವ ಪ್ರಯುಕ್ತ ಜಿ.ಪಂ ಮಾಜಿ ಸದಸ್ಯ ಮತೀನ ಅಹ್ಮದ ಪಟೇಲ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಟಿಪ್ಪು ಸುಲ್ತಾನ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ತಹಸೀಲ ಕಛೇರಿಯ ಹತ್ತಿರಯಿರುವ ಗುಡಿಸಲು ನಿವಾಸಿಗಳಿಗೆ ಊಟ ಮತ್ತು ಹಣ್ಣು ಹಂಪಲು ವಿತರಿಸಿದರು.