ಮುಂಡರಗಿ ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ಕಡ್ಡಾಯ ಮತದಾನ ಜಾಗೃತಿಗಾಗಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಡ್ಡಾಯ ಮತದಾನದ ಘೋಷಣೆಗಳನ್ನು ಕೂಗಿ ಮೇನ್ ಬಜಾರ್, ಜಾಗೃತ ಸರ್ಕಲ್ ಹಾಗೂ ಕೊಪ್ಪಳ ಕ್ರಾಸಿನಲ್ಲಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ತಾಪಂ ಸಿಬ್ಬಂದಿಗಳಾದ ಫಕ್ರುದ್ದೀನ್ ನದಾಫ, ಜಗದೀಶ ಎ, ಎಚ್ ಎಂ ಕಾತರಕಿ, ಅಶೋಕ ಅಣ್ಣಿಗೇರಿ, ಮಹಾತೇಂಶ ಖೋತ, ಶರಣಪ್ಪ ಗಿರಣಿ, ಸಿದ್ದರಾಮಪ್ಪ ಇದ್ದರು.