ಆನೇಕಲ್.ನ೧೧:ದೀಪಾವಳಿ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಆನೇಕಲ್ ವಿಧಾನ ಸಭಾ ಕ್ಷೇತ್ರದ ಬಿದರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಲ್ಕ್ ಪಾರಂ ಗ್ರಾಮದಲ್ಲಿ ವಾಸವಿರುವ ಸುಮಾರು ೧೫೦ ಕುಟುಂಬಗಳಿಗೆ ಅಕ್ಕಿ, ಬೆಲ್ಲ. ಎಣ್ಣೆ ಸೇರಿದಂತೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದ ಬಿಜೆಪಿ ಮುಖಂಡರಾದ ಬಿ.ಆರ್. ಮೂರ್ತಿ, ರಾಜೇಶ್ ರವರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಬಿಎಸ್ ಚೆನ್ನಪ್ಪ, ಮಾಜಿ ಉಪಾಧ್ಯಕ್ಷ, ಬಿಜೆಪಿ ಮುಖಂಡರಾದ ರಾಜಶೇಖರ್, ಶೇಖರ್, ಗಿರೀಶ್, ಸಂತೋಷ್, ಬಿ.ಜಿ. ರಾಜು, ಪ್ರೇಮ್, ಹರೀಶ್, ಪಾಪಣ್ಣ, ಮುರಳಿ, ಯಾರಬ್ ಪಾಷ, ರೆಹಮಾನ್, ಬಾಬು, ಸಂಪಂಗಿರಾಮಯ್ಯ ಮತ್ತಿತರು ಹಾಜರಿದ್ದರು