ನವಲಗುಂದ ಪಟ್ಟಣದ ಲಾಲಗುಡಿ ಹನಮಂತ ದೇವರ ಸನ್ನಿಧಿಯಲ್ಲಿ ಹನುಮ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಹನಮ ಮೂರ್ತಿಗೆ ಅಭಿಷೇಕ, ಹೋಮ ಹವನ ಪೂಜಾ ಕೈಕಂಕರ್ಯ ನೆರವೇರಿದವು, ಮೂರ್ತಿಗೆ ಬೆಳ್ಳಿಕವಚ ತೊಡಿಸಿ ಹೂವಿನ ಅಲಂಕಾರ ಮಾಡಲಾಗಿತ್ತು. ಮಾತೆಯರಿಂದ ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಭಜನೆ, ಸಂಕೀರ್ತನೆಯೊಂದಿಗೆ ತೂಗಲಾಯಿತು.ನಂತರ ಮಹಾಪೂಜೆ ನೆರವೇರಿಸಿದರು.