ಇತ್ತೀಚಿಗೆ ಕಲಬುರ್ಗಿಯಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಹುಬ್ಬಳ್ಳಿ ವತಿಯಿಂದ ಹಜರತ್ ಸೈಯ್ಯದ ಖಾಜಾ ಬಂದಾನವಾಜ್ ಗೇಸುದರಾಜ ದರ್ಗಾ ಶರೀಫದಲ್ಲಿ ಹೂವಿನ ಗಲೀಫ್ ಅತ್ತಾರವನ್ನು ಅರ್ಪಿಸಿ ಫಾತೇಹಾಖಾನಿಯನ್ನು ಮಾಡಿ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಮಹಮ್ಮದ ಯುಸುಫ ಸವಣೂರ, ಅಲ್ತಾಫನವಾಜ್ ಎಂ.ಕಿತ್ತೂರ, ಬಶೀರ ಅಹಮ್ಮದ ಹಳ್ಳೂರ, ದಾದಾಹಯಾತ್ ಕೈರಾತಿ ಅಬ್ದುಲ ಮುನಾಫ ದೇವಗಿರಿ, ಎಂ.ಎ.ಪಠಾಣ, ಅಶ್ಫಾಕ್ ಬಿಜಾಪುರಿ, ಅಜ್ಜು ಧಾರವಾಡ ಮತ್ತಿತರರು ಉಪಸ್ಥಿತರಿದ್ದರು.