85 ಪ್ರತಿಭಾವಂತರಿಗೆ ಸನ್ಮಾನ

ಬೀದರ: ಜೂ.12: ನಗರದ ಮೈಲೂರು ಕ್ರಾಸ್ ಮಹಾಲಕ್ಷ್ಮೀ ಸಭಾಂಗಣದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ವೀರ ಕನ್ನಡಿಗರ ಸೇನೆ ಜಿಲ್ಲಾ ರಾಜ್ಯ ಘಟಕದಿಂದ ಬೀದರ ಜಿಲ್ಲೆ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಪ್ರೇಮಸಾಗರ ದಾಂಡೆಕರ, ಮಾಡಿದರು. ಭಾರತದ ಭವಿಷ್ಯದ ಪ್ರಜೆಗಳು ಇಂದಿನ ವಿದ್ಯಾರ್ಥಿಗಳು.ಶಿಕ್ಷಣದ ಹುಲಿಯ ಹಾಲು ಕುಡಿದರವರು ದೇಶದ ಪ್ರಗತಿಗೆ ಘರ್ಜೆನೆ ಮಾಡಬೇಕು. ಕಷ್ಟ ಸಂಕಷ್ಟಗಳನ್ನು ಎದುರಿಸಿ ತಂದೆತಾಯಿ, ಪಾಲಕರುಗಳು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕಿರ್ತಿಶಿಖರವನ್ನು ಕಟ್ಟಬೇಕು. ಅಧ್ಯಕ್ಷತೆಯನ್ನು ಜ್ಞಾನೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ. ಕಾಶಿನಾಥ ಚಲುವ ವಹಿಸಿ, ತಂದೆತಾಯಿಗೆ ಮುಪ್ಪಿನಲ್ಲಿ ಮಕ್ಕಳು ಕಷ್ಟವನ್ನು ಕೊಡದೆ ಮಕ್ಕಳಂತೆ ತಂದೆತಾಯಿಯವರಿಗೆ ನೋಡಿಕೊಳ್ಳಬೇಕು. ಕ್ರಾಂತಿಯ ಬೆಳಕು ಕೃತಿಯನ್ನು ಕುರಿತು ಡಾ. ರಾಮಚಂದ್ರ ಗಾಣಪೂರು, ಸಂಚಲಿತ ಸಮಾಜದ ಶಕ್ತಿ ಸಮಾಜದೊಳಗೆ ಕ್ರಾಂತಿ ಮೂಲಕ ಬೆಳಕಾದವರ ಬಗ್ಗೆ ಕೃತಿಯಲ್ಲಿದೆ. ದ್ಯಾನದಿಂದ ಬುದ್ಧನಾಗು ಕೃತಿಯನ್ನು ಕುರಿತು ಶ್ರೀಮತಿ ಸುನೀತಾ ದಾಡಿಗೆ ರವರು ಮಾತನಾಡಿ ಧ್ಯಾನ ಎಲ್ಲಾ ಮನುಷ್ಯರ ಶಾಂತಿ ಜೀವನ ಆರೋಗ್ಯಕರ ಜೀವನಕ್ಕೆ ಅವಶ್ಯಕವಾಗಿರುವ ಕೃತಿಯಾಗಿದೆ. ವೇದಿಕೆ ಮೇಲೆ ಕಸಾಪ ತಾಲ್ಲೂಕ ಅಧ್ಯಕ್ಷರಾದ ಎಂ ಎಸ್ ಮನೋಹರ, ನಗರ ಸಭೆ ಸದಸ್ಯರಾದ ದಿಗಂಬರ ಮಡಿವಾಳ, ಸಮಾಜ ಸೇವಕರಾದ ಶಶಿಕಾಂತ ಪೊಲೀಸ ಪಾಟೀಲ್, ಕಾಶಿನಾಥ ಕಾಂಬಳೆ, ಸುಧಾಕರ ರಾಜಗೀರಾ, ಕರಾದಸಂಸ ಜಿಲ್ಲಾ ಸಂಚಾಲಕರಾದ ಉಮೇಶಕುಮಾರ ಸ್ವಾರಳಿಕರ ವಿದ್ಯಾರ್ಥಿಗಳ ಮುಂದಿನ ಭವಿಷದ ಬದುಕು ರೂಪಿಸಿಕೊಳ್ಳುವುದರ ಬಗ್ಗೆ ಮಾತನಾಡಿದರು. ಸಾನಿಕಾ ಬಸವಸಾಗರ, ಸುಮಿತ, ಪ್ರಥ್ವಿರಾಜ ಹುಡಿಗಿ, ಸುಹಾಸಿನಿ, ಸುಕನ್ಯಾ, ಮೇಘಣ ಗುರುಬಸವ ಸ್ವಾಮಿ ಪ್ರಸಾದ, ಪ್ರಥ್ವಿರಾಜ ಗೋಡಬಲೆ, ಮೇಘನ, ನಾಗೇಶಕುಮಾರ, ದೌಲತರಾವ ಗುರುತಾಜ,ಪ್ರತಿಕ್ಷಾ ದಯಾಸಾಗರ,ಸಾಯಿನಾಥ, ಕೃಷ್ಣ ಶಿವರಡ್ಡಿ ಭಾಗ್ಯಶ್ರೀ ಬಿಂಧು, ಸಂಗಮೇಶ, ನಿತಿಶಕುಮಾರ, ಪಲ್ಲವಿ ಮಾನಿಷ, ನಾಗೇಶ ಅಜಯ, ಸ್ನೇಹ, ರಾಧಿಕಾ,ಸಹಾನ, ಪೂಜ್ಯಾ, ಸಮೀರಖಾನ್, ಓಂಕಾರ, ಶೀಲಾವಂತ, ವಿಶಾಲ ಆಶ್ವಿನಿ, ಬಸವಾರಾದ್ಯಾ, ವೈಷ್ಣವಿ, ಗುರುಪ್ರಸಾದ, ಮೊನಿಕಾ,ಕಿರಣ, ಚಾಮುಂಡೆಶ್ವರಿ, ಚಂದ್ರಶೇಖರ ಸೇರಿದಂತೆ ಜಿಲ್ಲೆಯ 85 ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಮಾಡಲಾಯಿತು. ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಕಳೆದ ಐದು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿಕೊಂಡು ಬಂದಿರುತ್ತೇವೆ ಸನ್ಮಾನ ಸ್ವೀಕಾರ ಮಾಡಿಕೊಂಡು ಬಂದಿರುವ ವಿದ್ಯಾರ್ಥಿಗಳು ಡಾಕ್ಟರ ಇಂಜಿನಿಯರ ಐ ಐಟಿ ಮಾಡಿ ಸರ್ಕಾರಿ ಸೇವೆಯಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಹಾಗೂ ಪದಾಧಿಕಾರಿಗಳಿಗೆ ನೆನಪುಮಾಡಿಕೊಳ್ಳುತ್ತಿರುವದು ಖುಷಿ ತಂದಿದೆ. ವಿಶ್ವ ಕನ್ನಡಿಗರ ಸಂಸ್ಥೆ ಕಾರ್ಯವನ್ನು ರಾಜ್ಯವ್ಯಾಪ್ತಿಯಾಗಿ ಬೆಳಸಿದ ಕಿರ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ. ನಿರೂಪಣೆಯನ್ನು ಕವಿತ್ರಿ ಸನಿತಾ ಬಿಕ್ಲೆ ವಂದನಾರ್ಪಣೆ ಶರಣಬಸಪ್ಪಾ ಫುಲೆ ಮಾಡಿದರು ಹರಿಷ ಚಕ್ರವರ್ತಿ ಕಾಶಿನಾಥ ಕಾಂಬಳೆ ರವರು ಕನ್ನಡದ ಗೀತೆಗಳನ್ನು ಹಾಡಿದರು.