ವಿಜಯಪುರ ಪಟ್ಟಣದ ಹದಿನಾರನೇ ವಾರ್ಡ್ ನ ಮಾಜಿ ಪುರಸಭಾ ಸದಸ್ಯ ಮುಬಾರಕ್ ರವರ ನಿವಾಸದಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಾಂಗ್ರೆಸ್ನ ರಕ್ಷಾ ರಾಮಯ್ಯ ರವರು ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ವಿಶೇಷವಾಗಿ ರೇಷ್ಮೆ ಗೂಡಿನಿಂದ ತಯಾರಿಸಿದ ಹಾರವನ್ನು ಹಾಕಿ ಅಭಿನಂದಿಸಿದರು. ಕೆಪಿಸಿಸಿ ಕಾರ್ಯದರ್ಶಿ, ವಿ ಮಂಜುನಾಥ್, ಪುರಸಭಾ ಸದಸ್ಯರುಗಳಾದ ಹನೀಫ್ ಉಲ್ಲಾ, ರಾಜಣ್ಣ, ಇಕ್ಬಾಲ್, ಮಾಜಿ ಸದಸ್ಯರುಗಳಾದ ಮುಬಾರಕ್, ಜೆ ಎನ್ ಶ್ರೀನಿವಾಸ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾಂಗ್ರೆಸ್ ಅಧ್ಯಕ್ಷರಾದ ಗೌಸ್ಕಾನ್, ಟೌನ್ ಅಧ್ಯಕ್ಷ ಆಫ್ಝಲ್, ಸಬತುಲ್ಲ, ಜಗದೀಶ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿಎಂ ನಾಗರಾಜು, ಕಾರ್ಯದರ್ಶಿ ಕೋಕೋ ಕೋಲಾ ಮಂಜುನಾಥ್, ಡಾಬಾಮಧು ಮತ್ತಿತರ ಮುಖಂಡರುಗಳು ಉಪಸ್ಥಿತರಿದ್ದರು.